ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ನಿಜಾಮರಿಂದ ಆಡಳಿತ: ಖರ್ಗೆ ಕುಟುಂಬದ ವಿರುದ್ಧ ಎನ್‌.ಮಹೇಶ್ ವಾಗ್ದಾಳಿ

Published 28 ಫೆಬ್ರುವರಿ 2024, 15:56 IST
Last Updated 28 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಕಲಬುರಗಿ: ‘ಹೈದರಾಬಾದ್ ಕರ್ನಾಟಕದಿಂದ ನಿಜಾಮರು ಹೊರಟು ಹೋದ ಬಳಿಕ ಕುಟುಂಬ ರಾಜಕಾರಣ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ನಿಜಾಮರು ಆಡಳಿತ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್ ಅವರು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಟೀಕಿಸಿದರು.

ನಗರದಲ್ಲಿ ಬುಧವಾರ ನಡೆದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ನಾನಾದ ಮೇಲೆ ನನ್ನ ಮಗ, ನನ್ನ ಮಗನ ಬಳಿಕ ಮೊಮ್ಮಕ್ಕಳು, ಒಂದು ವೇಳೆ ಮೊಮ್ಮಕ್ಕಳು ಬರಲಾಗದಿದ್ದರೆ ಅಳಿಯ ರಾಜಕೀಯಕ್ಕೆ ಬರಬೇಕು ಎಂಬ ಕುಟುಂಬ ರಾಜಕೀಯದ ಪ್ರಾಬಲ್ಯವನ್ನು ಕಿತ್ತೆಸೆಯಬೇಕು. ಜಿಲ್ಲೆಯಲ್ಲಿ ದೂರದೃಷ್ಟಿಯುಳ್ಳ ನಾಯಕರನ್ನು ಹುಟ್ಟು ಹಾಕಬೇಕು’ ಎಂದು ಪ್ರತಿಪಾದಿಸಿದರು.

‘ಅಪ್ಪನ ಬಳಿಕ ಮಗ, ಮಗನ ನಂತರ ಮೊಮ್ಮಗ ಗೆದ್ದು ಬರಲು ಕಲಬುರಗಿ ಏನು ನಿಮ್ಮ ಕುಟುಂಬದ ಆಸ್ತಿಯಾ? ರಾಜೀನಾಮೆ ಕೊಟ್ಟು ಹೊರ ಬಂದು ಬೇರೆಯವರಿಗೆ ಅವಕಾಶ ಮಾಡಿಕೊಡಿ. ಜಿಲ್ಲೆಯಲ್ಲಿ ಬೇರೆಯವರಿಗೆ ಸಾಮರ್ಥ್ಯ ಇಲ್ಲವೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT