ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಲಿ ಭಾಷೆಯ ಸಂಸ್ಕೃತಿಯಲ್ಲೇ ಸಂಸ್ಕಾರ: ಪ್ರೊ. ದಯಾನಂದ ಅಗಸರ

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಭಿಮತ
Published : 28 ಆಗಸ್ಟ್ 2024, 15:54 IST
Last Updated : 28 ಆಗಸ್ಟ್ 2024, 15:54 IST
ಫಾಲೋ ಮಾಡಿ
Comments

ಕಲಬುರಗಿ: ‘ಬುದ್ಧ ಮತ್ತು ಬೌದ್ಧ ಧರ್ಮದ ನೆಲೆಗಳ ಅಥವಾ ಬೆಳವಣಿಗೆಗಳ ಸಂಸ್ಕೃತಿಯನ್ನು ಗಮನಿಸಿದಾಗ ಪಾಲಿ ಭಾಷೆಗೆ ತನ್ನದೇ ಆದ ಸಂಸ್ಕೃತಿಯ ಜೊತೆಯಲ್ಲಿ ಸಂಸ್ಕಾರವೂ ಇದೆ’ ಎಂದು ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಪಾಲಿ ಇನ್‌ಸ್ಟಿಟ್ಯೂಟ್ ನಳಂದ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಬೌದ್ಧ ತ್ರಿಪಿಟಕಗಳ ಅನುಸಂಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಾಲಿ ಭಾಷೆ ಇಂದು ಜಗತ್ತಿನ ಅಧ್ಯಯನದ ಭಾಷೆಯಾಗಿ ನಡೆದು ಬರುತ್ತಿದೆ. ಈ ಕಾಲಘಟ್ಟದಲ್ಲಿ ನಾವು ಬುದ್ಧನ ವಿಚಾರಗಳನ್ನು ಇನ್ನಷ್ಟು ಆಳವಾಗಿ ತಿಳಿಯಬೇಕಾದರೆ ಪಾಲಿ ಭಾಷೆಯ ಅಧ್ಯಯನ ಮತ್ತು ಸಂಸ್ಕಾರ ರೂಢಿಸಿಕೊಳ್ಳುವುದರ ಜೊತೆಯಲ್ಲಿ ಇನ್ನಷ್ಟು ಕಲಿಯಬೇಕಾಗಿದೆ’ ಎಂದು ಹೇಳಿದರು.

ಬೌದ್ಧ ವಿದ್ವಾಂಸ ಕೆ.ಪಿ.ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಬುದ್ಧನಿಗೆ ಜ್ಞಾನೋದಯ ಸಂದರ್ಭವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಬೌದ್ಧ ಹಾಗೂ ಬುದ್ಧನ ತತ್ವಗಳಲ್ಲಿ ಇರುವಂತಹ ಅನುಭವಗಳನ್ನು ಪಡೆಯುವ ಮೂಲಕ ನಾವು ನಮ್ಮ ಅಸ್ತಿತ್ವವನ್ನು ಹುಡುಕುವ ಪ್ರಯತ್ನ ಮಾಡಬೇಕು’ ಎಂದರು.

ನಳಂದ ಪಾಲಿ ಇನ್‌ಸ್ಟಿಟ್ಯೂಟ್ ಗೌರವ ನಿರ್ದೇಶಕ ಪ್ರೊ. ಮಲ್ಲೆಪುರಂ ವೆಂಕಟೇಶ್ ಮಾತನಾಡಿ, ‘ರಾಜ್ಯದೆಲ್ಲೆಡೆ ಪಾಲಿ ಭಾಷೆಯ ಅಧ್ಯಯನ ನಡೆಯುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆ ಕಾರಣ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ತೌಲನಿಕ ಅಧ್ಯಯನ ಸಂಸ್ಥೆಯಿಂದ ಹಲವಾರು ಸರ್ಟಿಫಿಕೇಟ್ ಕೋರ್ಸ್‌ ಹಾಗೂ ಕಾರ್ಯಗಾರಗಳನ್ನು ಮಾಡಲಾಗುತ್ತಿದೆ’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಮೇಶ ಬೇಗಾರ್, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಾಜನಾಳ ಲಕ್ಷ್ಮಣಕರ್ ಉಪಸ್ಥಿತರಿದ್ದರು. ಉಪನ್ಯಾಸಕ ಎಂ.ಬಿ.ಕಟ್ಟಿ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT