ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಗೀತಾ ರಾಜೇಂದ್ರ ಕೋರಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 567 ಅಂಕ (ಶೇ 94) ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಗ್ರಾಮಸ್ಥರಿಗೆ ಸಂತಸ ಮೂಡಿಸಿದ್ದಾಳೆ.

ಇವಳಿಗೆ ಕೆಎಎಸ್ ಅಧಿಕಾರಿಯಾಗುವ ಬಯಕೆ. 2008ರಲ್ಲಿ ಅಕ್ಕ ಶೃತಿಯು ಇದೇ ಕಾಲೇಜಿನಲ್ಲಿ ಓದಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಈಗ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ‘ಅಕ್ಕನ ಆ ಸಾಧನೆಯು ನನಗೆ ಸ್ಫೂರ್ತಿಯಾಗಿತ್ತು’ ಎನ್ನುವ ಸಂಗೀತಾ ತನ್ನ ಈ ಸಾಧನೆಗೆ ಕುಟುಂಬ ಸದಸ್ಯರು ಹಾಗೂ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಕಾರಣ ಎಂದು ಹೇಳುವುದನ್ನು ಮರೆಯಲಿಲ್ಲ.

ರೈತ ಕುಟುಂಬದ ಈ ವಿದ್ಯಾರ್ಥಿನಿಯು ಕನ್ನಡ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ತಲಾ 99 ಅಂಕ ಪಡೆದಿರುವದು ವಿಶೇಷ. ಇದೇ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಅಭ್ಯಾಸ ಮಾಡಿ ಶೇ 88ರಷ್ಟು ಅಂಕ ಪಡೆದಿರುವ ಪ್ರತಿಭಾವಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.