ಸೇಡಂ: ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 2 ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಶವಾದರೆ, ಒಂದು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೇಲುಗೈ ಸಾಧಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಶೇಖರ್ ಕಲಾಲ್ ಮತ್ತು ವೆಂಕಟಮ್ಮ ನರೇಶ ನಾಮಪತ್ರ ಸಲ್ಲಿಸಿದ್ದರು. ವೆಂಕಟಮ್ಮ ನರೇಶ ಅವರ ನಾಮಪತ್ರ ತಿರಸ್ಕೃತವಾಗಿದ್ದರಿಂದ, ಶೇಖರ ಕಲಾಲ್ ಅವರನ್ನು ಚುನಾವಣಾಧಿಕಾರಿ ಉಪಾಧ್ಯಕ್ಷರಾಗಿ ಪ್ರಕಟಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಮತ್ತು ಮನೋಹರ ಹಣಮಂತ ನಾಮಪತ್ರ ಸಲ್ಲಿಸಿದ್ದರು. ಲಕ್ಷ್ಮೀ ಅವರು 9 ಮತ ಪಡೆದರೆ, 8 ಮತ ಪಡೆದ ಮನೋಹರ ಪರಾಭವಗೊಂಡರು. ರವಿರಾಜ ಮುಡಬೂಳಕರ್ ಚುನಾವಣಾಧಿಕಾರಿಯಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಜಗದೇವಪ್ಪ ಮತ್ತು ನಾಗೇಂದ್ರಪ್ಪ ಬಸಣ್ಣ ನಾಮಪತ್ರ ಸಲ್ಲಿಸಿದ್ದರು. ನಾಗಮ್ಮ 10 ಮತ ಪಡೆದರೆ, 8 ಮತ ಪಡೆದ ನಾಗೇಂದ್ರಪ್ಪ ಪರಾಭವಗೊಂಡರು. ಒಂದು ಮತ ತಿರಸ್ಕೃತವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾವಿತ್ರಮ್ಮ ಲಕ್ಷ್ಮಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕಲ್ಯಾಣಕುಮಾರ ಅವಿರೋಧ ಪ್ರಕಟಿಸಿದರು.