ಸಂವಿಧಾನಕ್ಕೆ ಬೆಂಕಿ; ಕ್ರಮಕ್ಕೆ ಒತ್ತಾಯ

7

ಸಂವಿಧಾನಕ್ಕೆ ಬೆಂಕಿ; ಕ್ರಮಕ್ಕೆ ಒತ್ತಾಯ

Published:
Updated:
Deccan Herald

ಕಲಬುರ್ಗಿ: ನವದೆಹಲಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ಕೋಮುವಾದಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ಮಾಡಿದರು.

ಬಿಜೆಪಿಯು ಸಂವಿಧಾನ ಸುಟ್ಟಿರುವವರ ಪರವಾಗಿ ಇರುವುದು ಖಂಡನೀಯ. ಈ ಕೃತ್ಯ ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐನ ಸುನಿಲ್ ಮಾನ್ಪಡೆ, ಶಂಕರ ಕವಲಗಿ, ರಾಹುಲ್ ಟಿಳೆಕರ್, ಮೈಲಾರಿ ದೊಡ್ಡಮನಿ, ಶ್ರೀಶಾಂತ ಆರ್ಯ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !