ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ | ಕಿವಿಗೆ ಹಾವು ಕಚ್ಚಿ ಮಹಿಳೆ ಸಾವು

Published 29 ಜೂನ್ 2024, 16:16 IST
Last Updated 29 ಜೂನ್ 2024, 16:16 IST
ಅಕ್ಷರ ಗಾತ್ರ

ವಾಡಿ: ಮಳೆ ಕಾರಣದಿಂದ ಮರದ ಆಸರೆ ಪಡೆದಿದ್ದ ರೈತ ಮಹಿಳೆ ಮೈಮೇಲೆ ಮರದಿಂದ ಹಾವು ಬಿದ್ದು ಕಚ್ಚಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ಸೂಗೂರು(ಎನ್) ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಜರುಗಿದೆ.

ಕೂಲಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದ ವಿಜಯಲಕ್ಷ್ಮೀ ವೀರಭದ್ರ ತೆಳಗೇರಿ(44) ಹಾವು ಕಡಿತದಿಂದ ಮೃತಪಟ್ಟಿದ್ದಾರೆ.

ಶುಕ್ರವಾರ ಸಂಜೆ ಜಮೀನಿನಿಂದ ಮನೆಗೆ ಮರಳುತ್ತಿದ್ದಾಗ ಮಳೆ ಬಂದ ಕಾರಣ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಮರದ ಮೇಲೆಯೇ ಇದ್ದ ಹಾವು ಮಹಿಳೆ ಮೇಲೆ ಬಿದ್ದು ಕಿವಿಗೆ ಕಚ್ಚಿದೆ. ಯಾದಗಿರಿ ಆಸ್ಪತ್ರೆ ನಂತರ ಕಲಬುರಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮಹಿಳೆ ಮೃತಪಟ್ಟಿದ್ದಾಳೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಗೆ ಪತಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಶನಿವಾರ ಸಂಜೆ ಸೂಗೂರು(ಎನ್) ಗ್ರಾಮದಲ್ಲಿ ನೆರವೇರಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT