ಕಲಬುರಗಿ: ವೇಗವಾಗಿ ಗುರಿ ಸೇರಿದ ಮಂಗಳೂರಿನ ಸೇಂಟ್ ಅಲೋಷಿಯಸ್ ಶಾಲೆಯ ತಸ್ಮಯಿ ಶೆಟ್ಟಿ ಅವರು ಇಲ್ಲಿ ನಡೆದ ದಕ್ಷಿಣ ವಲಯ (2) ಸಿಬಿಎಸ್‌ಇ ಶಾಲೆಗಳ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಕೊನೆಯ ದಿನ ಮಿಂಚಿದರು.
ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕೊನೆಗೊಂಡ ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನವಾದ ಭಾನುವಾರ 12 ವರ್ಷದೊಳಗಿನ ಬಾಲಕಿಯರ ಇನ್‌ಲೈನ್ 1,000 ಮೀಟರ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ತಸ್ಮಯಿ 1 ನಿಮಿಷ 53.46 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಪುಣೆಯ ಫೀನಿಕ್ಸ್ ಶಾಲೆಯ ಜಿಯಾ ಗಿರೀಶ್ ಶೆಟ್ಟಿ ಅವರನ್ನು ಹಿಂದಿಕ್ಕಿದರು.
ಕೊನೆಯ ದಿನ ಮಹಾರಾಷ್ಟ್ರ ಶಾಲೆಗಳ ಸ್ಪರ್ಧಿಗಳು ಉತ್ತಮ ಪ್ರದರ್ಶನದಿಂದ ಗಮನಸೆಳೆದರು.
ಫಲಿತಾಂಶಗಳು (ಮೊದಲ ಎರಡು ಸ್ಥಾನ): ಬಾಲಕರು: ಇನ್‌ಲೈನ್ 1000 ಮೀಟರ್ಸ್: 10 ವರ್ಷದೊಳಗಿನವರು: ನಿರನ್ ರಾಜ್ ಎನ್. (ಕೊಚ್ಚಿ, ಕೇರಳ, ಕಾಲ: 1 ನಿ.56.45 ಸೆ.)–1, ಸಾಯಿಷ್ ಮುಚಾಲ್ (ನಾಗಪುರ, ಮಹಾರಾಷ್ಟ್ರ)–2
12 ವರ್ಷದೊಳಗಿನವರು: ಯುವಾನ್ ಚೋಪ್ರಾ (ಮುಂಬೈ, ಮಹಾರಾಷ್ಟ್ರ, ಕಾಲ: 1 ನಿ. 43.93 ಸೆ.)–1, ಸ್ವರಾಜ್ ಗಿರಿ (ಅಮರಾವತಿ, ಮಹಾರಾಷ್ಟ್ರ)–2
14 ವರ್ಷದೊಳಗಿನವರು: ಆರವ್ ಸಮೀರ್ ಷಾ (ಪುಣೆ, ಮಹಾರಾಷ್ಟ್ರ, ಕಾಲ: 1 ನಿ. 53.13 ಸೆ.)–1, ಶ್ರವಣ್ (ಪುಣೆ)–2
19 ವರ್ಷದೊಳಗಿನವರು: ಧ್ರುವ (ಕುಮಾರನ್ಸ್ ಸ್ಕೂಲ್, ಬೆಂಗಳೂರು, ಕಾಲ: 1 ನಿ. 52. 74 ಸೆ.)–1, ಸಯ್ಯದ್ ಅಖ್ತರ್ (ಥಾಣೆ, ಮಹಾರಾಷ್ಟ್ರ)
ಬಾಲಕಿಯರು: ಇನ್‌ಲೈನ್ 1000 ಮೀ.: 8 ವರ್ಷದೊಳಗಿನವರು: ಲಕ್ಷಿತಾ ಶ್ರೀರಾಮ್ (ಆರ್ಚಿಡ್ಸ್ ಸ್ಕೂಲ್, ಮಹಾರಾಷ್ಟ್ರ, ಕಾಲ: 2 ನಿ.4.69 ಸೆ.)–1, ನಿಹಿತಾ ಮಚೇಕರ್ (ಮುಂಬೈ)–2
10 ವರ್ಷದೊಳಗಿನವರು: ಕಾವ್ಯಾ ವರದರಾಜನ್ (ವಿಬ್‌ಗಯಾರ್, ಬೆಂಗಳೂರು, ಕಾಲ: 1 ನಿ.59.20 ಸೆ.)–1, ಕೃಷ್ಣಿ ಉಮೇಕರ್ (ಅಮರಾವತಿ, ಮಹಾರಾಷ್ಟ್ರ)–2
12 ವರ್ಷದೊಳಗಿನವರು: ತಸ್ಮಯಿ ಶೆಟ್ಟಿ (ಸೇಂಟ್ ಅಲೋಷಿಯಸ್ ಸ್ಕೂಲ್, ಮಂಗಳೂರು, ಕಾಲ: 1 ನಿ.53.46ಸೆ.)–1, ಜಿಯಾ ಗಿರೀಶ್ ಶೆಟ್ಟಿ (ಪುಣೆ)–2
14 ವರ್ಷದೊಳಗಿನವರು: ಅಸ್ಮಿ ರಾವತ್ (ಪುಣೆ, ಕಾಲ: 1.58 ಸೆ.)–1, ಕುಸುಮ್ ಗೌಡ (ವಿದ್ಯಾನಿಕೇತನ, ಬೆಂಗಳೂರು)–2
16 ವರ್ಷದೊಳಗಿನವರು: ಮೃನ್ಮಯಿ ಚೌರೆ (ನಾಗಪುರ, ಕಾಲ: 1 ನಿ. 54.64 ಸೆ.)–1, ಶಿವಾಯಿ ರಾಜೆಭೋಸಲೆ (ಪುಣೆ)–2
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.