ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್: ಉತ್ತಮ ಆಟದ ವಿಶ್ವಾಸದಲ್ಲಿ ಅವನಿ

Published 19 ಸೆಪ್ಟೆಂಬರ್ 2023, 16:27 IST
Last Updated 19 ಸೆಪ್ಟೆಂಬರ್ 2023, 16:27 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅತ್ಯಂತ ಕಿರಿಯ ಗಾಲ್ಫ್ ಆಟಗಾರ್ತಿ ಬೆಂಗಳೂರಿನ ಅವನಿ ಪ್ರಶಾಂತ್‌ ಅವರು ಉತ್ತಮ ಸಾಧನೆಯ ವಿಶ್ವಾಸದಲ್ಲಿದ್ದಾರೆ.

ಏಪ್ರಿಲ್‌ನಲ್ಲಿ ಕೋಲ್ಕತ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ, 16 ವರ್ಷದ ಅವನಿ ಭಾರತೀಯ ಮಹಿಳಾ ಗಾಲ್ಫ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

‘ಚಿನ್ನದ ಗುರಿಯೊಂದಿಗೆ ಸ್ಪರ್ಧೆಗೆ ಇಳಿಯುತ್ತೇನೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಉತ್ಕೃಷ್ಟ ಆಟವನ್ನು ಪ್ರದರ್ಶಿಸುವತ್ತ ಗಮನ ಹರಿಸುತ್ತೇನೆ’ ಎಂದು ಅವನಿ ತಿಳಿಸಿದ್ದಾರೆ.

ಕೋಚ್‌ ಲಾರೆನ್ಸ್ ಬ್ರದರಿಜ್‌ ಬಳಿ 2018ರಿಂದ ತರಬೇತಿ ಪಡೆಯುತ್ತಿರುವ ಅವನಿ, ಈ ವರ್ಷದ ಆರಂಭದಲ್ಲಿ ಮನಿಲಾದಲ್ಲಿ ನಡೆದ ಕ್ವೀನ್ ಸಿರಿಕಿಟ್ ಕಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಪ್ರಸ್ತುತ ಅವರು ಕರ್ನಾಟಕ ಗಾಲ್ಫ್ ಸಂಸ್ಥೆಯಲ್ಲಿ ಆಡುತ್ತಿದ್ದಾರೆ.

ಪ್ರಣವಿ ಅರಸ್‌ ಮತ್ತು ಎರಡು ಬಾರಿಯ ಒಲಿಂಪಿಯನ್ ಅದಿತಿ ಅಶೋಕ್ ಅವರೊಂದಿಗೆ ಅವನಿ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಗಾಲ್ಫ್‌ ಸ್ಪರ್ಧೆಗಳು ಸೆ.28ರಿಂದ ಅ.1ರ ವರೆಗೆ ನಡೆಯಲಿವೆ.

ಅವನಿ ಪ್ರಶಾಂತ್‌
ಅವನಿ ಪ್ರಶಾಂತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT