ಬುಧವಾರ, ಸೆಪ್ಟೆಂಬರ್ 22, 2021
22 °C
ಜಿಟಿಜಿಟಿ ಮಳೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ಆಳಂದ: ಕಾಲಿನ ಬೆರಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ತಾಲ್ಲೂಕಿನ ಸಾವಳೇಶ್ವರ ಗ್ರಾಮದ ವಿಶ್ವಸನ್ಮತಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಲಕ್ಷ್ಮಿಪುತ್ರ ಅಮೃತರಾವ ಮಾಡ್ಯಾಳೆ ಕಾಲಿನ ಬೆರಳುಗಳ ಸಹಾಯದಿಂದ ಪರೀಕ್ಷೆ ಬರೆದರು.

ವಿದ್ಯಾರ್ಥಿಯ ಎರಡೂ ಕೈಗಳು ಶಕ್ತಿ ಕಳೆದುಕೊಂಡು, ಮುಂಗೈವರೆಗೆ ಮಾತ್ರ ಬೆಳೆದಿವೆ. ಅಂಗೈ, ಬೆರಳುಗಳು ಇಲ್ಲದ ಲಕ್ಷ್ಮಿಪುತ್ರ ಯಾರ ನೆರವೂ ಪಡೆಯದೇ ತನ್ನ ಕಾಲು ಬೆರಳುಗಳಿಂದ ನೂತನ ಮಾದರಿಯ ಪರೀಕ್ಷೆ ಎದುರಿಸಿದ.

ಕಾಲ ಬೆರಳಿನಿಂದ ಪ್ರಶ್ನೆ ಪತ್ರಿಕೆಯ ಪುಟ ತಿರುವಿ, ಒಎಂಆರ್‌ ಶೀಟ್‌ನಲ್ಲಿ ಗುರುತು ಹಾಕಿದ್ದು ಕೇಂದ್ರಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಸೇರಿದಂತೆ ಇತರ ಸಿಬ್ಬಂದಿಯ ಗಮನ ಸೆಳೆಯಿತು.

27 ಕೇಂದ್ರಗಳಲ್ಲಿ ಪರೀಕ್ಷೆ: ಬುಧವಾರ 27 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿಯ ಭಾಷಾ ವಿಷಯಗಳ ಪರೀಕ್ಷೆ ಏಕಕಾಲದಲ್ಲಿ ನಡೆದವು. ಮುಂಜಾನೆಯಿಂದ ಶುರುವಾದ ಜಿಟಿಜಿಟಿ ಮಳೆಯಲ್ಲೇ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್ ನಡೆಸಿ, ಮಾಸ್ಕ್ ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು