ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಗೆ ಚೈತನ್ಯ ತುಂಬಿದ ಕಲಾವಿದ ಶಂಕರಜಿ

Published 18 ಫೆಬ್ರುವರಿ 2024, 4:35 IST
Last Updated 18 ಫೆಬ್ರುವರಿ 2024, 4:35 IST
ಅಕ್ಷರ ಗಾತ್ರ

ಚಿಂಚೋಳಿ: ಆಧುನಿಕತೆಯ ಭರಾಟೆ, ತಂತ್ರಜ್ಞಾನದ ಅತಿವೇಗದ ಬೆಳವಣಿಗೆಯ ನಡುವೆಯೂ ರಂಗಭೂಮಿ ಮತ್ತು ಕಲಾವಿದರು ವಿಶೇಷ ಪ್ರಭಾವ ಉಳಿಸಿಕೊಂಡಿದ್ದಾರೆ. ರಂಗಭೂಮಿ ಕಲಾವಿದ ಶಂಕರಜಿ ಹೂವಿನ ಹಿಪ್ಪರಗಿ ಅವರು, ಸತತ 30 ವರ್ಷಗಳ ಸೇವೆಯ ಮೂಲಕ ರಂಗಭೂಮಿಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ.

ಪ್ರತಿಭಾವಂತ ಕಲಾವಿದರಾದ ಶಂಕರಜಿ ಅವರು, ಮೂಲತಃ ವಿಜಯಪುರ ಜಿಲ್ಲೆಯವರು. ಬದುಕು ಕಟ್ಟಿಕೊಂಡಿದ್ದು ಚಿಂಚೋಳಿಯಲ್ಲಿ. 4 ದಶಕಗಳು ಕಳೆದಿವೆ. ಆದರೆ ಅವರಲ್ಲಿನ ರಂಗಭೂಮಿ ಸೇವೆಯ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಈವರೆಗೆ 25ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ‘ತಾಳಿ ಹರಿಯಲಿಲ್ಲ, ಶೀಲ ಉಳಿಯಲಿಲ್ಲ’, ‘ಜಮೀನ್ದಾರ ಮನೆತನ’, ‘ದ್ವೇಷ ಅಳಿಸಬೇಕು, ದೇಶ ಉಳಿಯಬೇಕು’, ‘ಕರಾಳ ರಾತ್ರಿ’, ‘ಜೈ ಜವಾನ, ಜೈ ಕಿಸಾನ್’, ‘ಕೆಂಡ ಕಾರಿದ ಕನ್ಯೆ’ ಪ್ರಕಟಿತ ನಾಟಕಗಳು. ‘ದ್ವೇಷ ಅಳಿಯಬೇಕು, ದೇಶ ಉಳಿಯಬೇಕು’ ಮತ್ತು ‘ತಾಳಿ ಹರಿಯಲಿಲ್ಲ, ಶೀಲ ಉಳಿಯಲಿಲ್ಲ’, ‘ಜಿಲ್ಲಾಧಿಕಾರಿ’ ಎಂಬ ನಾಟಕಗಳು ಕರ್ನಾಟಕ ರಾಜ್ಯದ ಹೊರಗಡೆಯೂ ಪ್ರದರ್ಶನಗೊಂಡಿದ್ದು ಹೆಚ್ಚಿನ ಖ್ಯಾತಿ ತಂದು ಕೊಟ್ಟಿವೆ.

ಗ್ರಾಮೀಣ ಭಾಗದಲ್ಲಿ ಇಂದಿಗೂ ಪರಿಣಾಮಕಾರಿ ಮಾಧ್ಯಮವೆಂದರೆ ರಂಗಭೂಮಿ. ಗ್ರಾಮೀಣ ಪ್ರತಿಭೆಗಳನ್ನು ಒಗ್ಗೂಡಿಸಿ, ನಾಟಕ ಅಭಿನಯದ ಜತೆಗೆ ನಾಟಕ ರಚಿಸಿ ಬಯಲು ಸೀಮೆಯಲ್ಲಿ ರಂಗಭೂಮಿ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶಂಕರಜಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಸಮಾಜದ ಅಂಕುಡೊಂಕು, ಜಾತಿ ತಾರತಮ್ಯ, ಜಮೀನ್ದಾರರ ದಬ್ಬಾಳಿಕೆ, ಶೋಷಣೆ, ದೌರ್ಜನ್ಯ, ಶಿಕ್ಷಣದ ಮಹತ್ವ ಮತ್ತು ದುಶ್ಚಟಗಳು, ಅನೈತಿಕತೆ ಪರಿಣಾಮ ಹಾಗೂ ದೇಶಪ್ರೇಮ ಮತ್ತು ಸಾಮಾಜಿಕ ಮೌಲ್ಯವೇ ಅವರ ನಾಟಕಗಳ ಕಥಾಸಾರ.

ಹಿರಿಯ ಕಲಾವಿದ ಮತ್ತು ರಂಗಮಿತ್ರ ನಾಟ್ಯ ಸಂಘ ಕಲಬುರಗಿ ಅಧ್ಯಕ್ಷ ಶಾಮರಾವ್ ಕೊರವಿ ಅವರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಬಡ ಕಲಾವಿದರನ್ನು ಪ್ರೋತ್ಸಾಹಿಸಲು ನಾಟಕ ಪ್ರದರ್ಶನ ಏರ್ಪಡಿಸಿ, ಈವರೆಗೆ ಹಲವು ಕಲಾವಿದರಿಗೆ ₹ 2 ಲಕ್ಷಕ್ಕೂ ಅಧಿಕ ನೆರವು ನೀಡಿದ್ದಾರೆ.

ಜಿಲ್ಲೆಯ ರಂಗಭೂಮಿ ಕಲಾವಿದರನ್ನು ಒಗ್ಗೂಡಿಸಿ, ರಂಗಭೂಮಿ ಕ್ಷೇತ್ರದ ಬಲವರ್ಧನೆಗೆ ರಂಗ ಸಂಗಮ, ರಂಗಬುಗ್ಗಿ, ನಾಟಕೋತ್ಸವ, ಪ್ರತಿಭೆಗೊಂದು ರಂಗ ವೇದಿಕೆ.. ಹೀಗೆ ಹತ್ತು ಹಲವು ಕಾರ್ಯಕ್ರಮ ಜಿಲ್ಲಾ ಕೇಂದ್ರ ನಡೆಸಿದ್ದಾರೆ.

ತಾನಷ್ಟೆ ಬೆಳೆಯದೇ ಇತರ ಕಲಾವಿದರೂ ಬೆಳೆಯಬೇಕೆಂಬ ಆಶಯದ ಶಂಕರಜಿ ಅವರು, ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ, ಅವರಿಗೆ 5 ಗ್ರಾಂ ಚಿನ್ನ, ದಂಪತಿಗೆ ಹೊದಿಕೆ ಮೂಲಕ ಸನ್ಮಾನಿಸಿ ರಂಗ ಸುವರ್ಣ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದ್ದಾರೆ.

ಚಿಂಚೋಳಿಯಲ್ಲಿ ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆ ಅಂಗವಾಗಿ ಪ್ರತಿವರ್ಷ ನಾಟಕ ಅಭಿನಯ ಏರ್ಪಡಿಸುವಲ್ಲಿ ಶಾಮರಾವ ಕೊರವಿ ಯಶಸ್ವಿಯಾಗಿದ್ದಾರೆ.
ಹಾರಕೂಡ ಚನ್ನಬಸವೇಶ್ವರ ತಾಲ್ಲೂಕು ಹವ್ಯಾಸಿ ಕಲಾವಿದರ ನಾಟ್ಯ ಸಂಘ ಸ್ಥಾಪಿಸಿ, ನಾಟಕ ಅಭಿನಯಿಸಲಾಗುತ್ತಿದೆ. ಅದರಲ್ಲಿ 31ನೇ ಕಲಾಕುಸುಮ ಶಂಕರಜಿ ಹೂವಿನ ಹಿಪ್ಪರಗಿ ರಚಿಸಿದ ಅನುಮಾನ ತಂದ ಆಪತ್ತು ನಾಟಕ ಪ್ರದರ್ಶನ ಪ್ರಸಕ್ತ ವರ್ಷ ಮಾ. 18,19,20 ಹಮ್ಮಿಕೊಳ್ಳಲಾಗಿದೆ.

ಈವರೆಗೆ ಪ್ರದರ್ಶನಗೊಂಡ 34 ನಾಟಕಗಳಲ್ಲಿ ಎಚ್ಚರ ತಂಗಿ ಎಚ್ಚರ, ಗೌಡರ ಗದ್ದಲ, ಅಣ್ಣ ತಂಗಿ, ದುರಂತ ಹೆಚ್ಚು ಹೊರತುಪಡಿಸಿದರೆ, ಉಳಿದೆಲ್ಲ ನಾಟಕಗಳು ಶಂಕರಜಿ ರಚಿಸಿದ ನಾಟಕಗಳ ಪ್ರದರ್ಶನ ನಡೆಸಲಾಗಿದೆ. ಅದರಲ್ಲಿ ಅವರ ಅಭಿನಯವೂ ವಿಶೇಷವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದು, ಅಭಿಮಾನಿಗಳು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದ್ದಾರೆ.

ರಂಗಭೂಮಿ ಚಟುವಟಿಕೆ ನಿರಂತರ ನಡೆಯಲು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮ ಆಯೋಜಿಸಿ ಎಲೆಮರೆಯಂತಿರುವ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು ಅವಿಸ್ಮರಣೀಯ.
ಚಂದ್ರಶೇಖರ ಲಕಶೆಟ್ಟಿ, ರಂಗಭೂಮಿ ಕಲಾವಿದ, ಸಾಲೇಬೀರನಹಳ್ಳಿ
ಹಲವು ನಾಟಕಗಳಲ್ಲಿ ನಾಯಕ ಖಳನಾಯಕ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದೇನೆ. ಬೇರೆ ಕಲಾವಿದರಿಗೆ ಅವಕಾಶ ನೀಡಲು ರಂಗಭೂಮಿ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದೇವೆ. ಅದರಲ್ಲಿ ಶಂಕರಜಿ ಅವರ ಕೊಡುಗೆ ಹಿರಿದಾಗಿದೆ.
ಶಾಮರಾವ ಕೊರವಿ, ರಂಗಮಿತ್ರ ನಾಟ್ಯ ಸಂಘದ ಅಧ್ಯಕ್ಷ, ಕಲಬುರಗಿ
ವಿವಿಧ ನಾಟಕಗಳಲ್ಲಿ ಮನೋಜ್ಞ ಅಭಿನಯದಿಂದ ಪ್ರೇಕ್ಷರಿಂದ ಸೆಳೆಯುವ ಶಂಕರಜಿ ಹೂವಿನ ಹಿಪ್ಪರಗಿ ಅವರ ವಿವಿಧ ಭಂಗಿಗಳು
ವಿವಿಧ ನಾಟಕಗಳಲ್ಲಿ ಮನೋಜ್ಞ ಅಭಿನಯದಿಂದ ಪ್ರೇಕ್ಷರಿಂದ ಸೆಳೆಯುವ ಶಂಕರಜಿ ಹೂವಿನ ಹಿಪ್ಪರಗಿ ಅವರ ವಿವಿಧ ಭಂಗಿಗಳು
ವಿವಿಧ ನಾಟಕಗಳಲ್ಲಿ ಮನೋಜ್ಞ ಅಭಿನಯದಿಂದ ಪ್ರೇಕ್ಷರಿಂದ ಸೆಳೆಯುವ ಶಂಕರಜಿ ಹೂವಿನ ಹಿಪ್ಪರಗಿ ಅವರ ವಿವಿಧ ಭಂಗಿಗಳು
ವಿವಿಧ ನಾಟಕಗಳಲ್ಲಿ ಮನೋಜ್ಞ ಅಭಿನಯದಿಂದ ಪ್ರೇಕ್ಷರಿಂದ ಸೆಳೆಯುವ ಶಂಕರಜಿ ಹೂವಿನ ಹಿಪ್ಪರಗಿ ಅವರ ವಿವಿಧ ಭಂಗಿಗಳು
ವಿವಿಧ ನಾಟಕಗಳಲ್ಲಿ ಮನೋಜ್ಞ ಅಭಿನಯದಿಂದ ಪ್ರೇಕ್ಷರಿಂದ ಸೆಳೆಯುವ ಶಂಕರಜಿ ಹೂವಿನ ಹಿಪ್ಪರಗಿ ಅವರ ವಿವಿಧ ಭಂಗಿಗಳು
ವಿವಿಧ ನಾಟಕಗಳಲ್ಲಿ ಮನೋಜ್ಞ ಅಭಿನಯದಿಂದ ಪ್ರೇಕ್ಷರಿಂದ ಸೆಳೆಯುವ ಶಂಕರಜಿ ಹೂವಿನ ಹಿಪ್ಪರಗಿ ಅವರ ವಿವಿಧ ಭಂಗಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT