ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಟೊಮೆಟೊಗೆ ಅತಿ ಕನಿಷ್ಠ ಬೆಲೆ: ಕೆ.ಜಿಗೆ ₹10 ರಂತೆ ಮಾರಾಟ

ಕಡಿಮೆಯಾಗದ ಹಸಿ ಮೆಣಸಿನಕಾಯಿ ದರ
Published 20 ಸೆಪ್ಟೆಂಬರ್ 2023, 15:59 IST
Last Updated 20 ಸೆಪ್ಟೆಂಬರ್ 2023, 15:59 IST
ಅಕ್ಷರ ಗಾತ್ರ

ಕಲಬುರಗಿ: ಜುಲೈನಲ್ಲಿ ಕೆ.ಜಿಗೆ ₹200 ತಲುಪಿ ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೊ ದರ ಇದೀಗ ತೀವ್ರವಾಗಿ ಕುಸಿದಿದ್ದು, ಸದ್ಯ ಪ್ರತಿ ಕೆ.ಜಿಗೆ ₹10ರಂತೆ ಮಾರಾಟವಾಗುತ್ತಿದೆ.

ಬೆಲೆ ಏರುಗತಿಯಲ್ಲಿದ್ದಾಗ ₹2000, ₹2,500ಕ್ಕೂ ಹೆಚ್ಚು ಮಾರಾಟವಾಗಿದ್ದ 18–20 ಕೆ.ಜಿಯ ಒಂದು ಟ್ರೇ ಟೊಮೆಟೊ ಈಗ ಅತಿ ಕನಿಷ್ಠ ₹180–₹200ಗೂ ಕಡಿಮೆ ದರಕ್ಕೆ ಬಿಕರಿಯಾಗುತ್ತಿದೆ. ಮೊದಲಿಗಿಂತ ಈಗ ಟೊಮೆಟೊ ಗುಣಮಟ್ಟದಲ್ಲೂ ಸುಧಾರಣೆ ಕಂಡುಬಂದಿದ್ದು ಬಹುತೇಕ ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತಿದೆ.

‘ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ₹10 ಇದೆ. 3 ಕೆ.ಜಿ ಖರೀದಿಸಿದರೆ ₹20 ಎನ್ನುತ್ತಾರೆ. ಮನೆ ಹತ್ತಿರ ಬರುವ ವ್ಯಾಪಾರಿಗಳಲ್ಲಿ ಕೊಂಡರೆ ಈ ದರವಿಲ್ಲ’ ಎಂದು ಗ್ರಾಹಕ ಸೂಗೂರಪ್ಪ ಹೇಳಿದರೆ, ‘ಬೆಲೆ ಹೆಚ್ಚಾಗಿದೆ ಎಂದು ತಿಂಗಳಿಗೂ ಮುಂಚೆ ಬಹುತೇಕರು ಟೊಮೆಟೊ ಹಾಕಿದ್ದರು. ಸದ್ಯ ಆ ಬೆಳೆ ಬಂದಿದ್ದು ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಬೆಲೆ ಇಳಿದಿದೆ’ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ಇನ್ನು, ಈರುಳ್ಳಿ ದರ ಕಳೆದ ವಾರದಂತೆ ಪ್ರತಿ ಕೆ.ಜಿಗೆ ₹30 ಇದೆ. ಹಸಿ ಮೆಣಸಿನಕಾಯಿ ಪ್ರತಿ ಕೆ.ಜಿಗೆ ₹120ರಂತೆ ಮಾರಾಟವಾಗುತ್ತಿದೆ. ಕೆಲವು ತಳಿಗಳ ಆಧಾರದಲ್ಲಿ ದರದಲ್ಲೂ ವ್ಯತ್ಯಾಸವಿದೆ. ಉಳಿದಂತೆ ಆಲೂಗಡ್ಡೆ, ಬದನೆಕಾಯಿ, ಗಜ್ಜರಿ, ಸೌತೆಕಾಯಿಗಳ ದರ ಪ್ರತಿ ಕೆ.ಜಿಗೆ ₹60 ಇದೆ. ದೊಣ್ಣೆಮೆಣಸಿನಕಾಯಿ ಪ್ರತಿ ಕೆ.ಜಿಗೆ ₹70, ಹೀರೆಕಾಯಿ ₹50ರಂತೆ ಮಾರಾಟವಾಗುತ್ತಿವೆ.

ಸೊಪ್ಪುಗಳ ಬೆ‌ಲೆ: ಸೊಪ್ಪುಗಳ ಬೆಲೆಯಲ್ಲೂ ಈ ವಾರ ಸ್ಥಿರತೆ ಕಂಡುಬಂದಿದೆ. ಕೊತ್ತಂಬರಿ, ಪಾಲಕ್, ರಾಜಗಿರಿ, ಸಬ್ಬಸಗಿ, ಮೆಂತ್ಯೆ, ಈರುಳ್ಳಿ ಸೇರಿ ಲಭ್ಯ ಇರುವ ಎಲ್ಲ ಸೊಪ್ಪುಗಳ ಬೆಲೆ ಒಂದು ಕಟ್ಟಿಗೆ ₹10, 3ಕ್ಕೆ ₹20 ಇದೆ.

ಮೊಟ್ಟೆ: ನಗರದಲ್ಲಿ 100 ಮೊಟ್ಟೆಗಳ ದರ ₹510- ₹520 ಇದ್ದರೆ ಡಜನ್‌ಗೆ ₹60– ₹62 ಇದೆ. ಬಿಡಿಯಾಗಿ ₹7ಗೆ ಒಂದರಂತೆ ಮಾರಾಟ ಮಾಡಲಾಗುತ್ತಿದೆ.

ಚಿಕನ್ ಪ್ರತಿ ಕೆ.ಜಿಗೆ ₹210– ₹230 ಇದ್ದರೆ ಮಟನ್ ದರ ₹640– ₹680 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT