ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪ್ಪಾರ ಸಮಾಜದ ಪ್ರಗತಿಗೆ ಶ್ರಮಿಸಿ’

Last Updated 12 ಅಕ್ಟೋಬರ್ 2021, 3:33 IST
ಅಕ್ಷರ ಗಾತ್ರ

ಕುಷ್ಟಗಿ: ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಪ್ರತಿಯೊಬ್ಬರೂ ಶ್ರಮಿಸ ಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಣ್ಣ ಇಂಗಳದಾಳ ಹೇಳಿದರು.

ತಾಲ್ಲೂಕಿನ ಭಗೀರಥ ಸಮುದಾಯ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಚಂದಾಲಿಂಗ ಕ್ಷೇತ್ರದಲ್ಲಿ ನಡೆದ ಸಭೆ ಉದ್ಘಾಟಿಸಿ ಮಾತನಾಡಿದ ಅವರು. ಸಂಘಟನೆ ಬಲಪಡಿಸುವುದರ ಜೊತೆಗೆ ಎಲ್ಲರೂ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಬೇಕು. ಸಾಮಾಜಿಕವಾಗಿ ಇತರೆ ಸಮುದಾಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದರು.

ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ, ಈ ಸಮುದಾಯ ಸರ್ವ ಕ್ಷೇತ್ರದಲ್ಲೂ ಮುನ್ನೆಲೆಗೆ ಬರಲು ಈ ಸಮಾಜದ ಜನರು ಹೆಚ್ಚು ಸುಶಿಕ್ಷಿತರಾಗಬೇಕು. ದೇಶ ಮತ್ತು ರಾಜ್ಯದಲ್ಲಿ ಈ ಸಮಾಜದವರು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕ ಮತ್ತು ಸಾಮಾಜಿಕ, ರಾಜಕೀಯ ಕ್ಷೇತ್ರ ದಲ್ಲಿ ಮುನ್ನೆಲೆಗೆ ಬರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೇಮಣ್ಣ ಮೇಲಸಕ್ರಿ ಯಮನೂರಪ್ಪ ಬಳೂಟಿಗಿ, ಶರಣಗೌಡ ಪೊಲೀಸಪಾಟೀಲ, ಹನುಮಂತಪ್ಪ ನೀರಾವರಿ ಇತರರು ಮಾತನಾಡಿದರು.

ಜಿಲ್ಲಾ ಹಾಗೂ ತಾಲ್ಲೂಉ ಘಟಕಗಳ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಯುವ ಘಟಕದ ಪ್ರಮುಖರು, ಸಮುದಾಯದ ವಿವಿಧ ತಾಲ್ಲೂಕುಗಳ ಮುಖಂಡರು, ಸಮನ್ವಯ ಸಮಿತಿಯ ಹಿರಿಯ
ಸದಸ್ಯರು ಸಭೆಯಲ್ಲಿದ್ದರು.

ಪದಾಧಿಕಾರಿಗಳು: ತೀರ್ಥಪ್ಪ ಮ್ಯಾಗಳಮನಿ (ಗೌರವ ಅಧ್ಯಕ್ಷ), ಸಂಗಪ್ಪ ಭಾವಿಕಟ್ಟಿ (ಅಧ್ಯಕ್ಷ), ಕೆ.ಬಿ.ಮಂಜುನಾಥ (ಪ್ರಧಾನ ಕಾರ್ಯದರ್ಶಿ), ಬಸವರಾಜ ನೀರಾವರಿ (ಸಂಘಟನಾ ಕಾರ್ಯದರ್ಶಿ), ಪ್ರಾಣೇಶ (ಖಜಾಂಚಿ), ಪರಸಪ್ಪ ತೆವರನ್ನವರ, ಮಲ್ಲಪ್ಪ ಭಂಡಾರಿ, ಶರಣಪ್ಪ ಮುಗಳಿ, ಮಲ್ಲಪ್ಪ ಗದ್ದಿ (ಉಪಾಧ್ಯಕ್ಷರು). ಕೃಷ್ಣಪ್ಪ ಬಂಡರಗಲ್‌, ಪರಸಪ್ಪ ಕ್ವಾಟಿ, ಅಶೋಕ ಉಪ್ಪಾರ, ಕನಕಪ್ಪ ಭಂಡಾರಿ, ಚಂದಪ್ಪ ಕರೇಕಲ್, ಮುತ್ತು
ಗುರಿಕಾರ (ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT