ಗುರುವಾರ , ಅಕ್ಟೋಬರ್ 29, 2020
28 °C
ಸೇಡಂ: ವಿದ್ಯಾಗಮ ಕಲಿಕಾ ಬೋಧನೆಯಲ್ಲಿ ಶಾಲಾ ಶಿಕ್ಷಕರು ನಿರತ

ಕಲಿಕೆಗೆ ಸಂಪರ್ಕ ಸೇತುವೆ ‘ವಠಾರ ಪಾಠ’

ಅವಿನಾಶ ಎಸ್.ಬೋರಂಚಿ Updated:

ಅಕ್ಷರ ಗಾತ್ರ : | |

Prajavani

ಸೇಡಂ:ಮಕ್ಕಳು ಕಲಿಕೆಯಿಂದ ದೂರವಾಗದಿರಲಿ ಎಂಬ ಉದ್ದೇಶದಿಂದ ಆಗಸ್ಟ್ ತಿಂಗಳಲ್ಲಿ ಸರ್ಕಾರ ಆರಂಭಿಸಿದ ‘ವಠಾರ ಪಾಠ’ ಮಕ್ಕಳ ನಿರಂತರ ಕಲಿಕೆಗೆ ಸಂಪರ್ಕ ಸೇತುವೆಯಾಗಿದೆ.

ಸರ್ಕಾರ  ಜಾರಿಗೆ ತಂದ ‘ವಿದ್ಯಾಗಮ’ ಯೋಜನೆಯಡಿ ವಠಾರ ಶಾಲೆಗಳು ಮಕ್ಕಳನ್ನು ಕಲಿಕೆಯತ್ತ ಕೊಂಡೊಯ್ಯುತ್ತಿವೆ. ಶಿಕ್ಷಕರೇ ಬಡಾವಣೆಯ ವಠಾರ ಕೇಂದ್ರಗಳಿಗೆ ತೆರಳಿ 25 ವಿದ್ಯಾರ್ಥಿಗಳಿಗೊಬ್ಬರಂತೆ ಪಾಠ ಮಾಡುತ್ತಿದ್ದಾರೆ.

’ಕೆಲ ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕ ಪಾಠ ಆರಂಭಿಸಿದವು. ಆದರೆ ಗ್ರಾಮೀಣ ಭಾಗದ ಪಾಲಕರಲ್ಲಿ ಮೊಬೈಲ್ ಇರುವುದಿಲ್ಲ. ಮೊಬೈಲ್ ಇದ್ದರೂ ಸಹ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿತ್ತು. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಓದಿನಿಂದ ದೂರ ಉಳಿಯುವಂತಾಗಿತ್ತು. ಜೊತೆಗೆ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯೆ ಇರುವ ಸಂಬಂಧ ಕೂಡ ವಿರಳವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ವಠಾರ ಕೇಂದ್ರ ತಡೆಯೊಡ್ಡಿದೆ’ ಎನ್ನುತ್ತಾರೆ ಕೋಡ್ಲಾ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಶರಣಬಸಪ್ಪ ಬೆನಕನಹಳ್ಳಿ.

‘ಆರಂಭದಲ್ಲಿ ಪಾಲಕರು ವಠಾರ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದರು. ಆದರೆ ಈಗ ಯಾವುದೇ ಭಯವಿಲ್ಲದೆ ಕಳುಹಿಸುತ್ತಿದ್ದಾರೆ. ಈಗ ಹಾಜರಾತಿ ಸಂಖ್ಯೆ ಈಗ ಹೆಚ್ಚಾಗಿದೆ’ ಎನ್ನುತ್ತಾರೆ ಶಿಕ್ಷಕಿ ಸುಮಂಗಲಾ.

ನಾಲ್ಕು ಗೋಡೆಗಳ ಮಧ್ಯೆಯಾದರೆ ವಿದ್ಯಾರ್ಥಿಗಳ ಗಮನ ಒಂದೇ ಕಡೆ ಇರುತ್ತದೆ. ಬಹಿರಂಗ ಇರುವ ಪ್ರದೇಶಗಳಲ್ಲಿ ಪಾಠ ಬೋಧನೆ ಕಷ್ಟ. ಶಾಲೆಯೇ ನಮಗೆ ಪಾಠ ಮಾಡಲು ಚೆನ್ನ ಎನ್ನುತ್ತಾರೆ ಶಿಕ್ಷಕರೊಬ್ಬರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.