ಬುಧವಾರ, ಜನವರಿ 19, 2022
18 °C
12ಕ್ಕೆ ಜ್ಯೋತಿರ್ಲಿಂಗ ಮಂದಿರದ ಕಳಾಸಾರೋಹಣ

ವಿವೇಕಾನಂದ ಜೀವನ ದರ್ಶನ ಪ್ರವಚನ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಪಟ್ಟಣದ ಹೊರ ವಲಯದ ಜ್ಯೋತಿರ್ಲಿಂಗ ಮಂದಿರದ ಕಳಸಾರೋಹಣ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ‘ವಿವೇಕಾನಂದರ ಜೀವನ ದರ್ಶನ’ ಪ್ರವಚನ ಆಯೋಜಿಸಲಾಗಿದೆ ಎಂದು ಜೈ ಭಾರತ ಸೇವಾ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನ್ನಾಥ ಮಹಾರಾಜ ಮುತ್ಯಾ ತಿಳಿಸಿದರು.

ಕಮಲಾಪುರ ಪಟ್ಟಣದ ಸರ್ಕಾರಿ ಕನ್ಯಾ ‍ಪ್ರೌಢ ಶಾಲೆಯ ಗುರುಶಾಂತಪ್ಪ ಮಾಲಿ ಪಾಟೀಲ ಕ್ರೀಡಾಂಗಣದಲ್ಲಿ ಸಂಸ್ಥೆ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜೀವನ ದರ್ಶನ ಪ್ರವಚನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡಿ.12ರ ಸ್ವಾಮಿ ವಿವೇಕಾನಂದ ಜಯಂತಿಯಂದು ಜ್ಯೋತಿರ್ಲಿಂಗ ದೇವಾಲಯದ ಕಳಸಾರೋಹಣ ಆಯೋಜಿಸಲಾಗಿದೆ. ಇದೇ ವೇಳೆ ಬಾಗಲಕೋಟೆಯ ರೇವಣಸಿದ್ದ ದೇವರು ಪ್ರವಚನ ನಡೆಸಿಕೊಡುವರು ಎಂದು ಹೇಳಿದರು.

ಡಿ.12ರ ಬೆಳಿಗ್ಗೆ ಪಟ್ಟಣದಿಂದ ದೇವಸ್ಥಾನದವರೆಗೆ ಮಹಿಳೆಯರು ಹೊತ್ತ ಕುಂಭ, ಕಳಶ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ ಜರುಗಲಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್, ಮುಖಂಡ ಜಿ.ಆರ್‌. ವಿಜಯಕುಮಾರ, ಗುರುರಾಜ ಮಾಟೂರ, ವಿಠಲ್‌ ಹೊಡಲ, ಶರಣು ಗೌರೆ, ಶರಣು ರಟಕಲ್‌, ಶಶಿಧರ ಮಾಕಾ, ಶರಣಬಸಪ್ಪ ದೊಶೆಟ್ಟಿ, ಪರಮೇಶ್ವರ ಓಕಳಿ, ಶಾಜಿರಾವ ಪಾಟೀಲ, ಸಂಗಮೇಶ ಶಾಸ್ತ್ರಿ, ಶಾಂತಕುಮಾರ ಹಿರೇಸಾವಳಗಿ, ವಕ್ತಾರ ವೈಜನಾಥ ಝಳಕಿ, ಗುಂಡಪ್ಪ ಹೊಳಕುಂದಿ, ರವಿ ಮೋಳಕೇರಿ, ಗುಂಡಪ್ಪ ಸಿರಡೋಣ, ಬಲವಂತ ಧಮ್ಮೂರ, ವೈಜನಾಥ ಮೂಲಿಮನಿ, ತೀರ್ಥ ಮೂಲಿಮನಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು