ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಕ್ಷಯರೋಗ ಜಾಗೃತಿ ಅಭಿಯಾನ

Last Updated 12 ಜನವರಿ 2022, 5:02 IST
ಅಕ್ಷರ ಗಾತ್ರ

ಇಂಗಳಗಿ (ವಾಡಿ): ಶೀಘ್ರ ಪತ್ತೆ ಹಾಗೂ ತ್ವರಿತ ಚಿಕಿತ್ಸೆ ಮೂಲಕ ಕ್ಷಯರೋಗದಿಂದ ಆಗಬಹುದಾದಂತಹ ದುಷ್ಪರಿಣಾಮಗಳನ್ನು ತಪ್ಪಿಸಿ ಮರಣ ಪ್ರಮಾಣ ತಗ್ಗಿಸಬಹುದಾಗಿದೆ ಎಂದು ಕಲಬುರ್ಗಿ ಕ್ಷಯರೋಗ ನಿರ್ಮೂಲನಾ ಹಿರಿಯ ಅಧಿಕಾರಿ ಸಂತೋಷ ಕುಡಳ್ಳಿ ಹೇಳಿದರು.

ಇಂಗಳಗಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿತ್ತಾಪುರ ಇವರ ಸಹಯೋಗದಲ್ಲಿ ಸಮೀಪದ ಇಂಗಳಗಿ ಗ್ರಾಮದಲ್ಲಿ ಹಮ್ಮಿಕೊಂಡ ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ’ಟಿಬಿ ಸೋಲಿಸಿ ಕರ್ನಾಟಕದಲ್ಲಿ ಗೆಲ್ಲಿಸಿ‘ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಗ್ರಾಮದ ಸದಸ್ಯರು ಸ್ವಸಹಾಯ ಸಂಘದ ಮಹಿಳೆಯರು ಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ ಜೊತೆಗೆ ಸಮುದಾಯದ ಜನರಿಗೆ ಕ್ಷಯರೋಗ ಕುರಿತು ಅರಿವು ಮಾಹಿತಿ ನೀಡಬೇಕು ಎಂದರು.

ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಎಂಬ ಘೋಷವಾಕ್ಯದಂತೆ ಸಮುದಾಯದ ಜನರು ಕ್ಷಯರೋಗ ನಿರ್ಮೂಲನಗೆ ಪಣತೊಡಬೇಕು. ಕ್ಷಯರೋಗ ಲಕ್ಷಣ ಇರುವವರು ಕಂಡು ಬಂದರೆ ಸಾರ್ವಜನಿಕರು ಅಂತವವರನ್ನು ಸಮೀಪದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೊಳಪಡಿಸಲು ನೆರವಾಗಬೇಕು. ಕ್ಷಯ ಒಂದು ಗೂಣಮುಖವಾಗುವ ರೋಗವಾಗಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ತ್ವರಿತ ಚಿಕಿತ್ಸೆಯಿಂದ ಮಾತ್ರ ರೋಗ ಹೋಗಲಾಡಿಸಬಹುದಾಗಿದ್ದು ದೇಶ ಹಾಗೂ ಕರ್ನಾಟಕವನ್ನು ಕ್ಷಯಮುಕ್ತಗೊಳಿಸವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.

ವಾಡಿ ಪಟ್ಟಣದ ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಳಿಮಠ ಮಾತನಾಡಿ, ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದೆ. ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. ಮತ್ತು ಆರು ತಿಂಗಳ ಚಿಕಿತ್ಸೆಯ ಸಂಧರ್ಭದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಂಬಂಧ ಮಾಸಿಕ ₹ 500ಗಳನ್ನು ಕೊಡಲಾಗುತ್ತದೆ. ಪ್ರತಿ ರೋಗಿಯು ಇದರ
ಉಪಯೋಗ ಪಡೆಯಬೇಕು ಎಂದು ಸಲಹೆ ನೀಡಿದ ಅವರು, ಗ್ರಾಮ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತೆಯರು ಆಶಾ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಾಗಿದೆ. ಸದೃಢ ಸಮಾಜ ನಿರ್ಮಿಸುವಲ್ಲಿ ತಳಮಟ್ಟದ ಆರೋಗ್ಯ ಸಿಬ್ಬಂದಿಗಳ ಪಾತ್ರ ಬಹಳ ದೊಡ್ಡದಾಗಿದೆ ಎಂದರು.

ವೇದಿಕೆ ಮೇಲೆತಾಲ್ಲೂಕ ಹಿರಿಯ ಕ್ಷಯರೋಗ ಮೇಲ್ವಿಚಾರಕ ಉದಯಕುಮಾರ್ ಭಾಗೋಡಿ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳ ಬುಳ್ಳಾ. ಅವರು ಮಹಿಳೆಯರ ಋತು ಸ್ರಾವದಿಂದ ಅಗುವ ತೊಂದರೆ ಬಗ್ಗೆ ಆರೋಗ್ಯ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಸಮುದಾಯಅಧಿಕಾರಿ ತ್ರಿವೇಣಿ ಜಾಧವ. ಸಮುದಾಯ ಆರೋಗ್ಯಾಧಿಕಾರಿ ಜನಿಮಾ ಇದ್ದರು.

ಕಾರ್ಯಕ್ರಮದಲ್ಲಿ ಕ್ಷಯರೋಗ ಕುರಿತು ಭಿತ್ತಿ ಪತ್ರದ ಮೂಲಕಜಾಗೃತಿ ಮೂಡಿಸಿಲಾಯಿತು. ಆಶಾ ಕಾರ್ಯಕರ್ತೆಯರಾದ ಸಾವಿತ್ರಿ ಗೋಪಾಲ, ಮಂಜುಳ, ರಾಜೇಶ್ವರಿ, ಸಾವಿತ್ರಿ ಪರಮೇಶ್ವರ. ಜಯಶ್ರೀ, ಮಲ್ಲಮ್ಮ, ಶಕುಂತಲಾ ಹೂಗಾರ. ಹಾಗೂ ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರು
ಭಾಗವಹಿಸಿದರು.

ಉದಯಕುಮಾರ್ ಸ್ವಾಗತಿಸಿದರು, ಮಂಜುಳಾ ನಿರೂಪಿಸಿದರು. ತ್ರಿವೇಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT