ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮೇಲೆ ಹಲ್ಲೆ; ಐವರಿಗೆ ಜೈಲು ಶಿಕ್ಷೆ

Last Updated 27 ಜುಲೈ 2022, 2:48 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಗ್ರಾಮದಲ್ಲಿ 2018ರ ಏಪ್ರಿಲ್ 18ರಂದು ಮಹಿಳೆಯೊಬ್ಬರ ವಿರುದ್ಧ ಅವಾಚ್ಯ ಶಬ್ದಗಳಿಂದ ಬಳಕೆ ಮಾಡಿ ಹಲ್ಲೆ ನಡೆಸಿದ್ದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಒಂದನೇ ಜೆಎಂಎಫ್‌ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಅಂದು ಗ್ರಾಮದ ಸುಭಾಷ್ ಸಂಬಣ್ಣ ಎಂಬಾತ ಮದ್ಯ ಸೇವಿಸಿದ ಮತ್ತಿನಲ್ಲಿ ಕೈಯಲ್ಲಿ ಬಡಿಗೆ ಹಿಡಿದು ಬಂದು ಮಹಿಳೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನ್ನ ವಿರುದ್ಧ ಕೇಸ್ ಮಾಡುತ್ತೀಯಾ. ಓಣಿಯಲ್ಲಿರುವ ಸಿಕ್ಕ ಸಿಕ್ಕವರನ್ನು ನನ್ನ ವಿರುದ್ಧ ಸಾಕ್ಷಿ ಹೇಳಲು ಪ್ರಚೋದಿಸುತ್ತೀಯಾ ಎಂದು ಬಯ್ಯುತ್ತಾ ಬಡಿಗೆಯಿಂದ ಹಲ್ಲೆ ಮಾಡಿದ. ಇದನ್ನು ಅನುಸರಿಸಿದ ತಿಪ್ಪಣ್ಣ ಭೀಮಶ್ಯಾ, ಅರುಣ ಭೀಮಶ್ಯಾ ಮುದ್ನಾಳ, ಚಂದ್ರಪ್ಪ ಗುಂಡಪ್ಪ ‍ಪೋಲಾ ಹಾಗೂ ಅಂಬರೀಷ ಸಂಬಣ್ಣ ಸಹ ಹಲ್ಲೆ ಮಾಡಿದರು ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ನೇಸರಗಿ ಅವರು ಎಲ್ಲ ಐವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ವಿವಿಧ ಕಲಂಗಳಡಿ ಆರು ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ ತಲಾ ₹ 3 ಸಾವಿರ ದಂಡ ವಿಧಿಸಿ ಆದೇಶಿಸಿದರು.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಇಸ್ಮಾಯಿಲ್ ಪಟೇಲ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT