ಬುಧವಾರ, ಮೇ 12, 2021
18 °C

ಖಜೂರಿ ಮಠಕ್ಕೆ ಮಹಿಳಾ ಉತ್ತರಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಗಡಿಗ್ರಾಮ ಖಜೂರಿಯ ಕೋರಣೇಶ್ವರ ಮಠದ ಉತ್ತರಾಧಿಕಾರಿಯನ್ನಾಗಿ ನೀಲ
ಲೋಚನಾ ತಾಯಿ ಅವರನ್ನು ಪೀಠಾಧಿಪತಿ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಘೋಷಿಸಿದರು.

ಖಜೂರಿಯ ಕೋರಣೇಶ್ವರ ಮಠಕ್ಕೆ ಈವರೆಗೆ ನಾಲ್ವರು ಮಠಾಧೀಶರು ಆಗಿದ್ದಾರೆ. ಸೋಮವಾರ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಸವಕಲ್ಯಾಣದ ಬಸವಾಶ್ರಮದ ಸತ್ಯಕ್ಕ ತಾಯಿ ಅವರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು.

ಖಜೂರಿ ಗ್ರಾಮದವರಾದ ನೀಲಲೋಚನಾ ತಾಯಿಯವರು ನೆರೆಯ ಮಹಾರಾಷ್ಟ್ರದ ಮುರುಮದಲ್ಲಿ ಮರಾಠಿಯಲ್ಲಿ 10ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ನಂತರ ಚಿತ್ರದುರ್ಗದ ಮುರುಘಾಮಠದಲ್ಲಿ 3 ವರ್ಷ ಅಧ್ಯಾತ್ಮಿಕ, ಧಾರ್ಮಿಕ ಶಿಕ್ಷಣ ಪಡೆದು ಸನ್ಯಾಸ ಸ್ವೀಕರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು