ಶನಿವಾರ, ಡಿಸೆಂಬರ್ 5, 2020
19 °C

ಆರಂಭಗೊಳ್ಳದ ಸಂಪೂರ್ಣ ಆನ್‌ಲೈನ್‌ ನೋಂದಣಿ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಇಲ್ಲಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಂಪೂರ್ಣ ಆನ್‌ಲೈನ್‌ ನೋಂದಣಿ ಸೇವೆ 
ಆರಂಭಗೊಂಡಿಲ್ಲ.

ಪ್ರಾಯೋಗಿಕವಾಗಿ ರಾಜ್ಯದ ಜಾಲ, ತುಮಕೂರು ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನ.2ರಿಂದ ಈ ಸೇವೆ ಆರಂಭಗೊಂಡಿದೆ. ಚಿಂಚೋಳಿ ಕಚೇರಿಯಲ್ಲಿಯೂ ನ.10ರಿಂದ ಈ ಸೇವೆ ಆರಂಭಿಸಲು ನಿರ್ಧರಿಸಲಾಗಿತ್ತು.

‘ತಾಂತ್ರಿಕ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಏಜೆನ್ಸಿಯವರು ಸಮಯಾವಕಾಶ ಕೇಳಿದ್ದರಿಂದ ನಮ್ಮ ಕಚೇರಿಯಲ್ಲಿ ಈ ಪ್ರಾಯೋಗಿಕ ಯೋಜನೆಯ ಅನುಷ್ಠಾನಕ್ಕೆ ಇನ್ನೂ ಒಂದು ತಿಂಗಳು ಕಾಲಾವಕಾಶವನ್ನು ಇಲಾಖೆ ನೀಡಿದೆ. ಹೀಗಾಗಿ ಈಗಿರುವಂತೆಯೇ ನೋಂದಣಿ ಪ್ರಕ್ರಿಯೆ ನಡೆದಿದೆ’ ಎಂದು ಇಲ್ಲಿಯ ಉಪ ನೋಂದಣಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು