ಮಂಗಳವಾರ, ಜನವರಿ 21, 2020
29 °C

ನೃತ್ಯ ಮಾಡುವಾಗಲೇ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಸಂಬಂಧಿಕರ ಮದುವೆ ಸಮಾರಂಭದ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿರುವಾಗಲೇ ಯುವಕನ ಪ್ರಾಣ ಪಕ್ಷಿ ಹಾರಿಹೋಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಅಶೋಕ (24) ಎಂಬ ಯುವಕನೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನವೆಂಬರ್‌ 30ರಂದು ರಾತ್ರಿ ಯುವಕ ನೃತ್ಯ ಮಾಡುವಾಗಲೇ ಸಾವಿಗೀಡಾಗಿದ್ದು, ಸಾವಿನ ಕೊನೆಯ ಕ್ಷಣಗಳು ಮೊಬೈಲ್ ಕ್ಯಾಮೆರದಾಲ್ಲಿ ಸೆರೆಯಾಗಿವೆ. ರಾತ್ರಿ ಸಮಯದಲ್ಲಿ ಸಾಕಷ್ಟು ಹೊತ್ತು ಡ್ಯಾನ್ಸ್ ಮಾಡಿದ ಅಶೋಕ ದಿಢೀರನೆ ಕೆಳಗೆ ಬೀಳುತ್ತಾನೆ. ಏನಾಯ್ತು ಅಂತ ನೋಡನೋಡುತ್ತಿದ್ದಂತೆ ಬಾರದ‌ ಕೊನೆಯುಸಿರೆಳೆಯುತ್ತಾನೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು