ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾರ್ಥಿಗಳಿಗೆ ಪುಸ್ತಕ ತಾಣ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಇದು ಸ್ಪರ್ಧಾತ್ಮಕ ಯುಗ. ನಾಗಲೋಟದಲ್ಲಿ ಓಡುತ್ತಿರವ ಜಗತ್ತಿನೊಂದಿಗೆ ನಾವೂ ಹೆಜ್ಜೆ ಹಾಕಲೇಬಾಕಾಗುತ್ತದೆ. ವಿದ್ಯಾರ್ಥಿಗಳಂತೂ ಈ ದಿಶೆಯಲ್ಲಿ ಮುನ್ನುಗ್ಗಲೇಬೇಕು. ಇಲ್ಲದಿದ್ದಲ್ಲಿ ಅವರ ಭವಿಷ್ಯದಲ್ಲಿ ಕತ್ತಲು ಕವಿಯುವುದು ಶತಸಿದ್ಧ!

ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಪರಿಕ್ಷಾರ್ಥಿಗಳಿಗೆ ಅನುಕೂಲವಾಗಲೆಂದು ಇಲ್ಲಿನ ಸಿದ್ಧರಾಮ ಬೇತಾಳೆ ಎಂಬ ಎಂ.ಎ, ಎಂ.ಇಡಿ ಪದವೀಧರ ಗುಲ್ಬರ್ಗದ ಲಾಲ್‌ಗೇರಿ ಕ್ರಾಸ್ ಹತ್ತಿರದ ಜವಳ್ಕರ್ ಕಾಂಪ್ಲೆಕ್ಸ್‌ನಲ್ಲಿ `ಕಾಂಪಿಟಿಟೀವ್ ಬುಕ್ ಸೆಂಟರ್' ಎಂಬ ಪ್ರತ್ಯೇಕ ಮಳಿಗೆ ಆರಂಭಿಸಿದ್ದಾರೆ.

ಇಂಗ್ಲಿಷ್ ಭಾಷೆಯ ಟಾಟಾ ಮ್ಯಾಗ್ರೋ ಸಿರೀಸ್, ಎಸ್.ಚಾಂದ್, ಉಪಕಾರ್ಸ್, ಕಿರಣ್, ಪ್ರತಿಯೋಗಿತಾ, ಮನೋರಮಾ ಈಯರ್ ಬುಕ್ ಮುಂತಾದ ಶ್ರೇಷ್ಠ ಪ್ರಕಾಶನದ ಪುಸ್ತಕಗಳ ಜೊತೆಗೆ ಕನ್ನಡದ ವಾಸನ್ಸ್, ನವ ಕರ್ನಾಟಕ, ಸಮಾಜ ಪುಸ್ತಕಾಲಯ, ಸಪ್ನ, ಎಂಸಿಸಿ, ಪದ್ಮ, ವಿದ್ಯಾ, ಸ್ಪರ್ಧಾಚೈತ್ರ, ರೂಪರಶ್ಮಿ, ಕನ್ನಡ ಸಾಹಿತ್ಯ ಪರಿಷತ್ತು, ವಿಜ್ಞಾನ ಸಾಹಿತ್ಯ ಪರಿಷತ್ತು ಮುಂತಾದ ಪ್ರಕಾಶನದ ಪುಸ್ತಕಳು ಇಲ್ಲಿ ದೊರೆಯುತ್ತವೆ.

ಸ್ಪರ್ಧಾಚೈತ್ರ, ದಿಕ್ಸೂಚಿ, ಬುತ್ತಿ, ಸ್ಪರ್ಧಾ ವಿಜೇತ, ಸ್ಪರ್ಧಾಸ್ಫೂರ್ತಿ, ಸ್ಪರ್ಧಾ ಚಾಣಕ್ಯ, ಸ್ಪರ್ಧಾ ಜಗತ್ತು, ಗೈಡ್ ಮುಂತಾದ ಕನ್ನಡದ ಸ್ಪರ್ಧಾತ್ಮಕ ಪತ್ರಿಕೆಗಳ ಜೊತೆಗೆ ಕಾಂಪಿಟೇಟಿವ್ ನಾಲೇಜ್ಡ್, ಕಾಂಪಿಟೇಟಿವ್ ವಿಶನ್, ಎಂಪ್ಲಾಮೆಂಟ್ ನಿವ್ಸ್ ಮುಂತಾದ ಇಂಗ್ಲಿಷ್ ನಿಯತಕಾಲಿಕಗಳೂ ಇಲ್ಲಿ ಸಿಗುತ್ತವೆ.
“ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆ ಆಧಾರ ಗ್ರಂಥಗಳನ್ನು ನೋಡಲು ಹೇಳುತ್ತಿದ್ದೇವು. ಆದರೆ ಅವು ಗುಲ್ಬರ್ಗದಲ್ಲಿ ಸಿಗುತ್ತಿರಲಿಲ್ಲ. ಮತ್ತೆ ವಿದ್ಯಾರ್ಥಿಗಳು ಬಂದು ಕೇಳಿದಾಗ ದೂರದ ಬೆಂಗಳೂರು ಇಲ್ಲವೇ ಬೇರೆಡೆ ಹೋಗಿ ನಾನೇ ತರಬೇಕಾಗಿತ್ತು. ಹೀಗಾಗಿ ಎಲ್ಲ ಪುಸ್ತಕಗಳು ಒಂದೆಡೆ ಲಭ್ಯವಿರುವ ಪ್ರತ್ಯೇಕ ಪುಸ್ತಕ ಮಳಿಗೆ ಆರಂಭಿಸಬೇಕಾಯಿತು. ಇದಕ್ಕೆ ಗುಲ್ಬರ್ಗದಲ್ಲಿರವ ಐದಾರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳೇ ನನಗೆ ಪ್ರೇರಣೆ' ಎಂದು ಎಸ್.ಎಸ್. ಬೇತಾಳೆ ತಿಳಿಸುತ್ತಾರೆ.

ಇಲ್ಲಿನ ಶರಣಗೌಡ ಪಾಟೀಲ ಡಿ.ಇಡಿ. ಕಾಲೇಜಿನ ಪ್ರಾಚಾರ್ಯರಾಗಿರುವ ಬೇತಾಳೆ, 12.12.2012ರ ಶುಭ ದಿನದಂದು ಸುಮಾರು 2 ಲಕ್ಷ ರೂಪಾಯಿ ಬಂಡವಾಳದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗಾಗಿ ಪುಸ್ತಕ ಕೇಂದ್ರವನ್ನು ಆರಂಭಿಸಿದ್ದಾರೆ. ಐಎಎಸ್, ಕೆಎಎಸ್‌ನಿಂದ ಹಿಡಿದು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ಎಸ್‌ಡಿಸಿ, ಎಫ್‌ಡಿಸಿ, ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ವಿವಿಧ ಪ್ರಕಾಶನದ ಪುಸ್ತಕಗಳು ಶೇ 10ರಿಂದ 15ರ ರಿಯಾತಿ ದರದಲ್ಲಿ ಇಲ್ಲಿ ಲಭ್ಯ.

ಪರೀಕ್ಷಾರ್ಥಿಗಳ ಭವಿಷ್ಯ ನಿರ್ಮಿಸುವ ಪುಸ್ತಕ ಮಳಿಗೆಗಳು ನಗರದಲ್ಲಿ ಸಾಕಷ್ಟಿವೆ. ಆದರೆ ಕೇವಲ ಸ್ಪರ್ಧಾತ್ಮಕ ಪರೀಕ್ಷಾ ತಯ್ಯಾರಿಗೆ ಬೇಕಾಗುವ ಪ್ರತ್ಯೇಕ ಪುಸ್ತಕ ಮಳಿಗೆಗಳನ್ನು ಕಾಣುವುದು ಇಡೀ ರಾಜ್ಯದಲ್ಲಿಯೇ ಬಹು ವಿರಳ. ಅಂತಹ ವಿರಳ ಪುಸ್ತಕಾಲಯಗಳಲ್ಲಿ ಇದು ಕೂಡ ಒಂದು. ಸ್ಪರ್ಧಾತ್ಮಕ ಪರೀಕ್ಷಾ ತಯ್ಯಾರಿಗೆ ಅಗತ್ಯವಾದ ಪುಸ್ತಕಗಳಿಗಾಗಿ ಮೊ.ನಂ. 9060381234ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT