ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡ್ಡೆಹೊಸೂರು: ಮನೆ ಗೇಟಿಗೆ ಸಿಲುಕಿ ಜಿಂಕೆ ಸಾವು

Published 4 ಸೆಪ್ಟೆಂಬರ್ 2024, 12:18 IST
Last Updated 4 ಸೆಪ್ಟೆಂಬರ್ 2024, 12:18 IST
ಅಕ್ಷರ ಗಾತ್ರ

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರಿನಲ್ಲಿ ಬುಧವಾರ ಬೆಳಿಗ್ಗೆ ಮನೆಯ ಗೇಟಿಗೆ ಜಿಂಕೆಯೊಂದು ಸಿಲುಕಿಕೊಂಡು ಮೃತಪಟ್ಟಿದೆ.

ಗ್ರಾಮದ ಚಲುವ ಎಂಬುವರ ಗೇಟ್‌ನಲ್ಲಿ ನುಗ್ಗಲು ಹೋಗಿ ಜಿಂಕೆಯ ತಲೆ ಸಿಲುಕಿಕೊಂಡು ಒದ್ದಾಡಿ ಮೃತಪಟ್ಟಿದೆ. ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿದೆ.

ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT