ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾಗಳಿಗೆ ಕಾರ್ಯಕ್ರಮ ನೀಡುವವರು ಅರ್ಜಿಯಲ್ಲಿ ಈ ಬಗ್ಗೆ ನಮೂದಿಸಬೇಕು. ಒಂದು ಕಲಾತಂಡಕ್ಕೆ ಒಂದು ಪ್ರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸೋಲೋ ನೃತ್ಯ, ಸೋಲೋ ಹಾಡಿಗೆ ಅವಕಾಶವಿಲ್ಲ. ನೃತ್ಯ ತಂಡದಲ್ಲಿ ಕನಿಷ್ಠ 4 ಮಂದಿ ಇರಬೇಕು. ಕಲಾವಿದರ ಆಯ್ಕೆಯ ಅಂತಿಮ ತೀರ್ಮಾನ ಸಮಿತಿಯದ್ದಾಗಿರುತ್ತದೆ.