ಕೆಸರಲ್ಲಿ ಮಿಂದೆದ್ದ ಕ್ರೀಡಾಪಟುಗಳು

7
ನಿಸರ್ಗ ಜೆಸಿಐ ಕೆಸರು ಗದ್ದೆ ಕ್ರೀಡಾಕೂಟ

ಕೆಸರಲ್ಲಿ ಮಿಂದೆದ್ದ ಕ್ರೀಡಾಪಟುಗಳು

Published:
Updated:
Deccan Herald

ಗೋಣಿಕೊಪ್ಪಲು: ಪೊನ್ನಂಪೇಟೆ ಜೆಸಿಐ ನಿಸರ್ಗ ವತಿಯಿಂದ ಬಿಟ್ಟಂಗಾಲದ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ ಅವರ ಗದ್ದೆಯಲ್ಲಿ ಸೋಮವಾರ ನಡೆದ 6ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು ಕೆಸರು ನೀರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಕೆಸರು ಗದ್ದೆಯೊಳಗಿನ ಮಹಿಳೆಯರ ಹಗ್ಗಜಗ್ಗಾಟ, ಪುರುಷರ ಫುಟ್‌ಬಾಲ್‌ ಹಾಗೂ ಓಟದ ಸ್ಪರ್ಧೆ ರೋಮಾಂಚಕವಾಗಿತ್ತು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಮರಗೋಡು ಫ್ರೆಂಡ್ಸ್ ತಂಡ ಜಯಗಳಿಸಿ ಪ್ರಶಸ್ತಿ ಪಡೆಯಿತು. ಸುಜಿ ತಂಡ ದ್ವಿತೀಯ ಸ್ಥಾನಗಳಿಸಿತು. ಒಟ್ಟು 6 ತಂಡಗಳು ಪಾಲ್ಗೊಂಡಿದ್ದವು. ಪುರುಷರ ಹಗ್ಗಜಗ್ಗಾಟದಲ್ಲಿ ಮದೆನಾಡುವಿನ ಕಾಫಿ ಲಿಂಕ್ಸ್ ಎ ತಂಡ ಪ್ರಥಮ, ಬಿ ತಂಡ ದ್ವಿತೀಯ ಸ್ಥಾನ ಪಡೆದವು. ಇದರಲ್ಲಿ 9 ತಂಡಗಳು ಪಾಲ್ಗೊಂಡಿದ್ದವು.

ಪುರುಷರ ಫುಟ್‌ಬಾಲ್ ಪಂದ್ಯದಲ್ಲಿ ಕುಂಜಿಲ ಲಕ್ಕಿ ಬಾಯ್ಸ್ ತಂಡ ಪ್ರಶಸ್ತಿ ಪಡೆಯಿತು. ಬ್ರದರ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಓಟದ ಸ್ಪರ್ಧೆ ನಡೆಯಿತು. ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಸ್ವಯಂ, ದೃವ್ ಮುತ್ತಣ್ಣ, ಕೀರ್ತನ್ ಗಣಪತಿ, ಬಾಲಕಿಯರಲ್ಲಿ ಜಾನ್ಸಿ ಬೊಳ್ಳಮ್ಮ, ಜೂನಿಯರ್ ಬಾಲಕರಲ್ಲಿ ಮರಗೋಡು ಫ್ರೆಂಡ್ಸ್‌ ವನ್, ಸುಬ್ರಮಣಿ, ಶಿಬು, ಬಾಲಕಿಯರಲ್ಲಿ ಅಬಿಹಬ್, ಮಾನ್ಯಾ ಮುತ್ತಮ್ಮ, ಪಾರ್ವತಿ, ಪುರುಷರ ವಿಭಾಗದಲ್ಲಿ ಜೀತು, ಲತೀಶ್, ಸಹಬ್, ಮಹಿಳೆಯರಲ್ಲಿ ಗಾಹ್ನವಿ ಬೋಪಣ್ಣ, ಗಾಯನಾ ಬೋಪಣ್ಣ, ಚೈತ್ರಾ ಪೂಜಾರಿ, ಮುಕ್ತ, ಪುರುಷರಲ್ಲಿ ಕಾವೇರಿ ಮನೆ ಚಂದ್ರಶೇಖರ್, ಮಂಜುನಾಥ್, ಕುಂಜಿಲ ಸುಲಿ, ಮಹಿಳೆಯರಲ್ಲಿ ಮೂಡಗದ್ದೆ ದಮಯಂತಿ, ರಕ್ಷಿತಾ, ಭವ್ಯ ಚರ್ಮಣ ಬಹುಮಾನ ಪಡೆದರು. ಓಟದ ಸ್ಪರ್ಧೆಯಲ್ಲಿ ಓಡಿದ 72 ವಯಸ್ಸಿನ ತಾಯಮ್ಮ ಅವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.

ಉದ್ಘಾಟನೆ: ಶಾಸಕ ಕೆ.ಜಿ.ಬೋಪಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಿದರು. ದಾನಿಗಳಾದ ಕರ್ತಮಾಡ ದಿಲಿಪ್ ಪೂಣಚ್ಚ, ಬೊಪ್ಪಂಡ ಪಾರ್ವತಿ, ಉದ್ಯಮಿ ಶ್ರೀಧರಣಿ, ಬಿಟ್ಟಂಗಾಲ ಗ್ರಾ.ಪಂ.ಅಧ್ಯಕ್ಷ ಸಾಬಾ ಬೆಳ್ಯಪ್ಪ, ಪೊನ್ನಂಪೇಟೆ ಜೆಸಿಐ ನಿಸರ್ಗ ಅಧ್ಯಕ್ಷ ಮೂಡಗದ್ದೆ ವಿಕ್ರಂ ಹಾಜರಿದ್ದರು. ಅಂತರರಾಷ್ಟ್ರೀಯ ಹಾಕಿ ಆಟಗಾರ್ತಿ ಮಲ್ಲಮಾಡ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !