ಶನಿವಾರ, ನವೆಂಬರ್ 23, 2019
18 °C
29ರಿಂದ ಮಡಿಕೇರಿ ದಸರಾ

ಜನೋತ್ಸವ ಕಚೇರಿ ಉದ್ಘಾಟನೆ

Published:
Updated:
Prajavani

ಮಡಿಕೇರಿ: ನಗರಸಭೆ ಸ್ಥಾಯಿ ಸಮಿತಿ ಕಚೇರಿಯಲ್ಲಿ ‘ಮಡಿಕೇರಿ ದಸರಾ ಜನೋತ್ಸವ’ ಕಚೇರಿಗೆ ಬುಧವಾರ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ನಂತರ, ಪೂಜಾ ಕಾರ್ಯಗಳು ನೆರವೇರಿದವು.

ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಹಾಗೂ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ದಸರಾಕ್ಕೆ ಯಾವುದೇ ವಿಘ್ನಗಳಿಲ್ಲದೆ ಜರುಗಲಿ ಎಂದು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 

ಸಮಿತಿ ಉಪಾಧ್ಯಕ್ಷ ಅರುಣ್ ಕುಮಾರ್, ಈ ಬಾರಿ ನಾಡಹಬ್ಬ ದಸರಾ ಯಾವುದೇ ವಿಘ್ನವಿಲ್ಲದೆ ನಡೆಯಬೇಕಿದೆ. ಇದೇ 29ರಿಂದ ದಸರಾ ಉತ್ಸವ ಆರಂಭವಾಗಲಿದ್ದು, ಪೂರ್ವ ಭಾಗಿಯಾಗಿ ಸಮಿತಿಗಳು ಅಗತ್ಯ ತಯಾರಿ ನಡೆಸುತ್ತಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)