ಕ್ರೀಡಾಕೂಟ ಉದ್ಘಾಟಿಸಿದ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ‘ಕ್ರೀಡಾಕೂಟ ಸಾಮರಸ್ಯ, ಬಾಂಧವ್ಯದ ಸಂಕೇತ. ಹಬ್ಬ, ಹರಿದಿನಗಳಂತೆ ಕ್ರೀಡಾಕೂಟಗಳು ಸಂಭ್ರಮದ ಸಂಕೇತ. ಯುವ ಸಮೂಹ ಕ್ರೀಡಾಸ್ಫೂರ್ತಿಯೊಂದಿಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕಿದೆ. ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿ ಮೆರೆಯಬೇಕಿದೆ’ ಎಂದರು.