ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಬಾಲಕನಿಂದ ಅಪಘಾತ: ತಾಯಿ ಬಂಧನ

Published 1 ಜೂನ್ 2024, 15:10 IST
Last Updated 1 ಜೂನ್ 2024, 15:10 IST
ಅಕ್ಷರ ಗಾತ್ರ

ಮಡಿಕೇರಿ: ಟ್ರ್ಯಾಕ್ಟರ್‌ನಿಂದ ಡಿಕ್ಕಿ ಹೊಡೆಸಿ ಪಾದಚಾರಿಯೊಬ್ಬರು ಗಾಯಗೊಳ್ಳಲು ಕಾರಣನಾದ ಮಗನಿಗೆ ತಾಯಿಯು ಮತ್ತೆ ಟ್ರ್ಯಾಕ್ಟರ್‌ ನೀಡಿದ್ದರಿಂದ ಕುಶಾಲನಗರ – ಸುಂದರನಗರ ರಸ್ತೆಯಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದು, ತಾಯಿ ಟಿ.ತುಳಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಮೇ 31ರಂದು ಬಾಲಕ ಟ್ರ್ಯಾಕ್ಟರ್‌ ಅನ್ನು ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆಸಿದ್ದ. ಈ ವರ್ಷವೂ ಮೇ 31ರಂದೇ ಅಪಘಾತ ನಡೆದಿದೆ. ಕಳೆದ ವರ್ಷದ ಅಪಘಾತಕ್ಕೆ ಸಂಬಂಧಿಸಿ, ತುಳಸಿ ಅವರಿಗೆ ನ್ಯಾಯಾಲಯವು ₹ 25 ಸಾವಿರ ದಂಡ ವಿಧಿಸಿ, 1 ದಿನ ಜೈಲು ಶಿಕ್ಷೆ ವಿಧಿಸಿತ್ತು. ‘ಸದ್ಯ, ಆಕೆಯ ವಿರುದ್ಧ ಐ‍ಪಿಸಿ 279 ಮತ್ತು 304(ಎ) ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಕ್ಕಳಿಗೆ ಹಾಗೂ ಚಾಲನಾ ಪರವಾನಗಿ ಹೊಂದಿಲ್ಲದವರಿಗೆ ಚಾಲನೆ ಮಾಡಲು ವಾಹನಗಳನ್ನು ನೀಡಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಸ್ಟಂಟ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT