ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆವಳುತ್ತಾ ರಸ್ತೆ ದಾಟುತ್ತಿದ್ದ ಅಂಗವಿಕಲ ವ್ಯಕ್ತಿ ಕಾರು ಹರಿದು ಸಾವು

Published 21 ಜೂನ್ 2024, 12:42 IST
Last Updated 21 ಜೂನ್ 2024, 12:42 IST
ಅಕ್ಷರ ಗಾತ್ರ

ಶನಿವಾರಸಂತೆ (ಕೊಡಗು ಜಿಲ್ಲೆ): ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಎರಡೂ ಕಾಲಿಲ್ಲದೇ ರಸ್ತೆಯಲ್ಲಿ ತೆವಳುತ್ತಾ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾರೊಂದು ಹರಿದಿದ್ದು, ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಮೈಸೂರು ಜಿಲ್ಲೆಯ ಸಾಲಿಗ್ರಾಮದ ಗಂಗೂರು ಸಮೀಪದ ನರ್ಸೇಗೌಡ ಹೊಲ ಗ್ರಾಮದ ಕೃಷ್ಣೇಗೌಡ (58) ಮೃತಪಟ್ಟವರು. ಇವರು ಕಳೆದ 10 ದಿನಗಳ ಹಿಂದೆಯಷ್ಟೇ ಪಟ್ಟಣಕ್ಕೆ ಬಂದು ಭಿಕ್ಷೆ ಬೇಡಿ, ಸಂತೆ ಮಾರುಕಟ್ಟೆಯಲ್ಲಿ ನಿತ್ಯವೂ ಮಲಗುತ್ತಿದ್ದರು. ಎಂದಿನಂತೆ ಶುಕ್ರವಾರ ರಸ್ತೆಯಲ್ಲಿ ತೆವಳುತ್ತಾ ಭಿಕ್ಷೆ ಬೇಡುತ್ತಾ, ವೃತ್ತದಲ್ಲಿ ರಸ್ತೆ ದಾಟುತ್ತಿದ್ದಾಗ ಶ್ರೀರಂಗಪಟ್ಟಣದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಇವರ ಮೇಲೆ ಹರಿದಿದೆ. ತಕ್ಷಣವೇ ಕಾರು ನಿಲ್ಲಿಸಿದ ಚಾಲಕ ಪುಟ್ಟರಾಮು ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿರುವುದನ್ನು ಗಮನಿಸಿ, ಕಾರು ಸಮೇತ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT