ಸೋಮವಾರ, ಜನವರಿ 20, 2020
29 °C

ಜೇಸಿ ಸಂಸ್ಥೆಯ ನೂತನ ಸಾಲಿನ ಅಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಜೇಸಿ ಸಂಸ್ಥೆಯ ನೂತನ ಸಾಲಿನ ಅಧ್ಯಕ್ಷರಾಗಿ ಉಷಾರಾಣಿ ಗುರುಪ್ರಸಾದ್ ಆಯ್ಕೆಯಾದರು.
ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಪುರುಷೋತಮ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಕಾರ್ಯದರ್ಶಿಯಾಗಿ ಮಂಜುಳಾ ಸುಬ್ರಮಣಿ, ಖಜಾಂಚಿಯಾಗಿ ಪುಷ್ಪಕ್, ಮಹಿಳಾ ರೇಟ್ಸ್ ಅಧ್ಯಕ್ಷೆಯಾಗಿ ವಿದ್ಯಾ ಸೋಮೇಶ್, ಜೂನಿಯರ್ ಜೇಸಿ ಸಂಸ್ಥೆಯ ಅಧ್ಯಕ್ಷರಾಗಿ ಬಿ.ಪಿ. ನಿಹಾಲ್ ಆಯ್ಕೆಯಾದರು.

ಉಳಿದಂತೆ ವಿವಿಧ ಘಟಕಗಳಿಗೆ ಮಾಯಾ ಗಿರೀಶ್, ಎಂ.ಎ. ರುಬೀನ, ಎಂ.ಪಿ. ಪ್ರಕಾಶ್, ಮೀನಾ ಮಂಜುನಾಥ್, ಎಂ.ಪಿ. ರಾಜೇಶ್, ಸುದೀಪ್, ಎಸ್.ಆರ್. ವಸಂತ್, ಉಷಾ ಪ್ರಕಾಶ್ ಆಯ್ಕೆಯಾದರು.

ನಿರ್ದೇಶಕರಾಗಿ ಕೆ.ಜೆ. ಗುರುಪ್ರಸಾದ್, ಎನ್.ಜೆ. ಮಂಜುನಾಥ್, ಪದ್ಮಜಾ ಅಶೋಕ್, ಗೀತಾ ರವಿ ನೇಮಕಗೊಂಡರು.
ಪದಗ್ರಹಣ ಕಾರ್ಯಕ್ರಮ ಡಿ.19ರ ಗುರುವಾರ ಸಾಕ್ಷಿ ಕನ್ವೆಂಷನ್ ಸಭಾಂಗಣದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಜೇಸಿ ವಲಯಾಧ್ಯಕ್ಷ ಸಮತ ಮಿಸ್ಕತ್, ಉಪಾಧ್ಯಕ್ಷ ಡಿ. ಪುನೀತ್ ಪಾಲ್ಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)