ಸಿದ್ದಾಪುರ: ಕಾಡಾನೆ ದಾಳಿಯಿಂದ ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಕಾರ್ಮಿಕ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಂಗಳವಾರ ಕಾಡಾನೆ ಕಾರ್ಯಾಚರಣೆ ಕೈಗೊಂಡಿದ್ದು, ತೋಟದಲ್ಲಿ 9 ಕಾಡಾನೆಗಳು ಕಾಣಿಸಿಕೊಂಡವು.

ಪಾಲಿಬೆಟ್ಟ, ಎಮ್ಮೆಗುಂಡಿ ಸುತ್ತಮುತ್ತಲಿನ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆ ಹಿಂಡು ಅರಣ್ಯದ ಕಡೆಗೆ ಅಟ್ಟಲು ಯತ್ನಿಸಿದ್ದಾರೆ.

‘ಕಾಡಾನೆಗಳ ಹಿಂಡು ಬೇರ್ಪಟ್ಟಿದ್ದು, ಪಟಾಕಿ ಸಿಡಿಸಿ 9 ಕಾಡಾನೆಗಳನ್ನು ದೇವಮಚ್ಚಿ ಅರಣ್ಯಕ್ಕೆ ಅಟ್ಟಲಾಯಿತು. ರಾತ್ರಿ ವೇಳೆಯಲ್ಲಿ ಕಾಡಾನೆಗಳು ಮರಳಿ ತೋಟಕ್ಕೆ ಬರುತ್ತಿದ್ದು, ರಾತ್ರಿ ಕೂಡ ಆನೆಗಳ ಚಲನವಲನ ಕಂಡು ಹಿಡಿಯಲು ಸಿಬ್ಬಂದಿ ನೇಮಿಸಲಾಗಿದೆ’ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್, ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಶಶಿ, ದೇವರಾಜ್, ಆರ್ಆರ್ಟಿ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.