ಮತ್ತಿಗೋಡು ಶಿಬಿರದಲ್ಲಿ ಮರಿ ಆನೆ ಸಾವು

7

ಮತ್ತಿಗೋಡು ಶಿಬಿರದಲ್ಲಿ ಮರಿ ಆನೆ ಸಾವು

Published:
Updated:
Prajavani

ಗೋಣಿಕೊಪ್ಪಲು: ಮತ್ತಿಗೋಡು ಸಾಕಾನೆ ಶಿಬಿರದ ಮರಿಯಾನೆ ಸಹದೇವ (7) ಮಂಗಳವಾರ ಮೃತಪಟ್ಟಿದೆ.

4–5 ತಿಂಗಳಿನಿಂದ ಸಹದೇವ ಆನೆಯು ಧನುರ್ವಾಯು (ಟೆಟನಸ್) ಕಾಯಿಲೆಯಿಂದ ಬಳಲುತ್ತಿತ್ತು ಎನ್ನಲಾಗಿದೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ಮೇರಿ ಆನೆಯಿಂದ ಜನಿಸಿದ್ದ ಸಹದೇವ ಮತ್ತಿಗೋಡು ಶಿಬಿರದಲ್ಲಿ ಮುದ್ದಾಗಿ ಬೆಳೆದಿತ್ತು.

ಕಾಯಿಲೆ ಗುಣಪಡಿಸಲು ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀಬ್ ರೆಹಮಾನ್ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದ್ದಾರೆ.

ವೈದ್ಯಾಧಿಕಾರಿಯು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಯಿತು.

ಈ ವೇಳೆ ಎಸಿಎಪ್ ಪ್ರಸನ್ನ ಕುಮಾರ್, ಆರ್‌ಎಫ್‌ಒ ಶಿವಾನಂದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !