ಸೋಮವಾರಪೇಟೆ: ಸರ್ಕಾರಿ ಭೂಮಿ ಹಾಗೂ ‘ಸಿ’ ಮತ್ತು ‘ಡಿ’ ಭೂಮಿ ಒತ್ತುವರಿ ತೆರವು ವಿಚಾರದಲ್ಲಿ ಸಮಸ್ಯೆಗೆ ಸಿಲುಕಿರುವ ರೈತರ ಸಂಕಷ್ಟಗಳ ಬಗ್ಗೆ ತಾಲ್ಲೂಕು ರೈತ ಹೋರಾಟ ಸಮಿತಿ ಪ್ರಮುಖರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಹಾಗೂ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ರೇಣುಕಾಂಬ ಅವರನ್ನು ಮೈಸೂರಿನಲ್ಲಿ ಈಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಭಾಗಶಃ ಗ್ರಾಮಗಳಲ್ಲಿರುವ ‘ಸಿ’ ಮತ್ತು ‘ಡಿ’ ಜಾಗ ಸೇರಿದಂತೆ ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಸರ್ಕಾರದ ಆದೇಶಗಳಿಂದ ಸಮಸ್ಯೆ ಸೃಷ್ಟಿಯಾಗಿದೆ. ಹಲವು ದಶಕಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಮಂದಿ ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ಗಮನ ಸೆಳೆದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರು, ‘ಜಂಟಿ ಸರ್ವೆ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರ ಗಮನ ಸೆಳೆಯುವುದಾಗಿ’ ಭರವಸೆ ನೀಡಿದರು.
ಮೈಸೂರು ವಿಭಾಗೀಯ ಕಚೇರಿಯಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ ರೇಣುಕಾಂಬ ಅವರನ್ನು ಭೇಟಿ ಮಾಡಿದ ನಿಯೋಗ, ವಾಸ್ತವ ಸ್ಥಿತಿಗತಿಗಳ ಬಗ್ಗೆ ವಿವರಿಸಿತು.
ಈ ಬಗ್ಗೆ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು.
ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಪದಾಧಿಕಾರಿಗಳಾದ ಬಿ.ಜೆ. ದೀಪಕ್, ಬಗ್ಗನ ಅನಿಲ್, ಹೂವಯ್ಯ ಮಾಸ್ಟರ್, ಕೂತಿ ದಿವಾಕರ್, ಹಿರಿಕರ ರಮೇಶ್, ಗೌಡಳ್ಳಿ ಮೊಗಪ್ಪ, ಯಡೂರು ಕುಶಾಲಪ್ಪ ಈ ಸಂದರ್ಭದಲ್ಲಿದ್ದರು.
ಸೋಮವಾರಪೇಟೆ: ಸರ್ಕಾರಿ ಭೂಮಿ ಹಾಗೂ ‘ಸಿ’ ಮತ್ತು ‘ಡಿ’ ಭೂಮಿ ಒತ್ತುವರಿ ತೆರವು ವಿಚಾರದಲ್ಲಿ ಸಮಸ್ಯೆಗೆ ಸಿಲುಕಿರುವ ರೈತರ ಸಂಕಷ್ಟಗಳ ಬಗ್ಗೆ ತಾಲ್ಲೂಕು ರೈತ ಹೋರಾಟ ಸಮಿತಿ ಪ್ರಮುಖರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಹಾಗೂ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ರೇಣುಕಾಂಬಾ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಭಾಗಶಃ ಗ್ರಾಮಗಳಲ್ಲಿರುವ ಸಿ ಮತ್ತು ಡಿ ಜಾಗ ಸೇರಿದಂತೆ ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತಾಪಿ ವರ್ಗದವರಿಗೆ ಸರ್ಕಾರದ ಆದೇಶಗಳಿಂದ ಸಮಸ್ಯೆ ಸೃಷ್ಟಿಯಾಗಿದೆ. ಹಲವು ದಶಕಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಮಂದಿ ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ಗಮನ ಸೆಳೆದರು.
ಈ ಹಿಂದೆ ತೆಗೆದುಕೊಂಡ ಅಧಿಕಾರಿಗಳ ಕ್ರಮದಿಂದಾಗಿ ಇದೀಗ ಸಮಸ್ಯೆಯಾಗುತ್ತಿದೆ. ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಈಗಾಗಲೇ ಭೂಮಿ ತೆರವುಗೊಳಿಸುವ ಆದೇಶಗಳನ್ನು ಹೊರಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಜಾಗವನ್ನು ಅರಣ್ಯಕ್ಕೆ ಸೇರ್ಪಡೆಗೊಳಿಸುವ ಸಂಬಂಧ ಕಾರ್ಯೋನ್ಮುಖರಾಗುತ್ತಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ರವಾನಿಸಬೇಕೆಂದು ಸಮಿತಿ ಪದಾಧಿಕಾರಿಗಳು ಸಂಸದರಲ್ಲಿ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯದುವೀರ್ ಅವರು ಜಂಟಿ ಸರ್ವೆ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಇದರೊಂದಿಗೆ ಅರಣ್ಯ ವ್ಯವಸ್ಥಾಪನಾಧಿಕಾರಿ ರೇಣುಕಾಂಬ ಅವರನ್ನು ಮೈಸೂರು ವಿಭಾಗೀಯ ಕಚೇರಿಯಲ್ಲಿ ಭೇಟಿ ಮಾಡಿದ ನಿಯೋಗ ವಾಸ್ತವ ಸ್ಥಿತಿಗತಿಗಳ ಬಗ್ಗೆ ವಿವರಣೆ ನೀಡಿತು. ಅರಣ್ಯ ಇಲಾಖೆಯಿಂದ ಬಂದಿರುವ ಆದೇಶದಲ್ಲಿ ಇಂತಿಷ್ಟು ಏಕರೆ ಎಂದು ನಮೂದಿಸಿದ್ದು ಸರ್ವೆ ನಂಬರ್ ಗಳ ಪ್ರಕಾರ ಜಾಗ ಯಾವುದು? ಈಗಿನ ಪರಿಸ್ಥಿತಿ ಏನಿದೆ? ಎಂಬ ಬಗ್ಗೆ ಸ್ಪಷನೆಯಿಲ್ಲ.
ಸಿ. ಮತ್ತು ಡಿ. ಜಾಗ ಸೇರಿದಂತೆ ಸರ್ಕಾರಿ ಜಾಗವನ್ನು ಅನೇಕ ದಶಕಗಳಿಂದ ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯದ ಮೂಲಕ ಬದುಕು ಕಟ್ಟಿಕೊಂಡಿದ್ದೇವೆ. ಜಾಗದ ಸಕ್ರಮೀಕರಣಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದೇವೆ. ಇದೀಗ ಒತ್ತುವರಿ ತೆರವಿಗೆ ಆದೇಶ ನೀಡಿರುವುದರಿಂದ ಆತಂಕ ಹೆಚ್ಚಿದೆ ಎಂಬ ಅಂಶವನ್ನು ಅಧಿಕಾರಿಯ ಗಮನಕ್ಕೆ ತರಲಾಯಿತು.
ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಪದಾಧಿಕಾರಿಗಳಾದ ಬಿ.ಜೆ. ದೀಪಕ್ ಬಗ್ಗನ ಅನಿಲ್ ಹೂವಯ್ಯ ಮಾಸ್ಟರ್ ಕೂತಿ ದಿವಾಕರ್ ಹಿರಿಕರ ರಮೇಶ್ ಗೌಡಳ್ಳಿ ಮೊಗಪ್ಪ ಯಡೂರು ಕುಶಾಲಪ್ಪ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.