ಸೋಮವಾರಪೇಟೆ: ಸಮೀಪದ ಕಾಜೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಆಕಸ್ಮಿಕವಾಗಿ ಗ್ರಾಮದ ಪುಷ್ಪಾ ಅವರ ಮನೆಗೆ ಬೆಂಕಿ ಬಿದ್ದು, ಮನೆಯ ಮಾಳಿಗೆ, ಸಾಮಗ್ರಿಗಳು ಸುಟ್ಟಿವೆ.

ಪುಷ್ಪಾ ಅವರು ತಮ್ಮ ಮೊಮ್ಮಗ ಹರ್ಷಿತ್ನೊಂದಿಗೆ ನಿದ್ರೆಯಲ್ಲಿದ್ದ ಸಂದರ್ಭ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚರಗೊಂಡ ಅವರು ಅಕ್ಕಪಕ್ಕದವರ ಗಮನಕ್ಕೆ ತಂದಿದ್ದಾರೆ. ಪಕ್ಕದ ಮನೆಯ ನಿವಾಸಿ ಐಗೂರು ಗ್ರಾ.ಪಂ. ಅಧ್ಯಕ್ಷ ವಿನೋದ್ ಅವರು, ಮನೆಯೊಳಗೆ ಮಲಗಿದ್ದ ಬಾಲಕ ಹರ್ಷಿತ್ನನ್ನು ಹೊರಗೆ ಕರೆತಂದಿದ್ದಾರೆ.

ಸ್ಥಳೀಯರು ಬೆಂಕಿ ನಂದಿಸಲು ಸಾಧ್ಯವಾಗದಿದ್ದಾಗ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.