ಗುರುವಾರ , ಜನವರಿ 23, 2020
28 °C

ಪ್ರಿಯಕರನ ಹಿಂಸೆ ತಾಳಲಾರದೆ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಪ್ರಿಯಕರನ ಕಾಟ ತಾಳದೆ ಬ್ಯಾಡಗೊಟ್ಟ ಗ್ರಾಮದ ನಿವಾಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿ ಹಾಗೂ ಕೂಡ್ಲೂರು ಗ್ರಾಮದ ಯುವಕ ಪವನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಪೋಷಕರು, ಯುವತಿಯನ್ನು ಸುಳ್ಯದ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಆದರೆ, ಪವನ್‌ ಪದೇ ಪದೇ ಪೂಜಾಳಿಗೆ ಕರೆ ಮಾಡುತ್ತಿದ್ದ. ಈ ವಿಚಾರವನ್ನು  ಯುವತಿ ತನ್ನ ಪೋಷಕರಿಗೆ ತಿಳಿಸಿದ್ದರು. ನಂತರ ಪೋಷಕರು ಮಗಳನ್ನು ಕಾಲೇಜು ಬಿಡಿಸಿ ಮನೆಯಲ್ಲೇ ಇರಿಸಿದ್ದರು. ಆದರೂ ಪವನ್‌ ಫೋನ್‌ ಮಾಡುವುದನ್ನು ನಿಲ್ಲಿಸಿರಲಿಲ್ಲ.

ಮಾನಸಿಕವಾಗಿ ನೊಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಸಾವಿಗೆ ಪವನ್‌ ಕಾರಣ ಎಂದು ಆಕೆ ಪೋಷಕರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು