ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಫಿ ಜಾಮಿಯಾ ಮಸೀದಿ ಷಾವಲಿ ಉರೂಸ್

Published 2 ಮಾರ್ಚ್ 2024, 4:05 IST
Last Updated 2 ಮಾರ್ಚ್ 2024, 4:05 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣದ ಹನಫಿ ಜಾಮಿಯಾ ಮಸೀದಿಯ ಹಝ್ರತ್ ಮಸ್ತಾನ್ ಮಲಂಗ್ ಷಾವಲಿ ಉರೂಸ್ ಶುಕ್ರವಾರ ನಡೆಯಿತು.

ಮಸೀದಿಯಲ್ಲಿ ಸಂಜೆ ಗಂಧ ಮಹೋತ್ಸವ ನಡೆದು, ಮಹಿಳಾ ಸಮಾಜದ ಬಳಿಯ ಜಾಮಿಯಾ ಮಸೀದಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಸ್ಥಳೀಯ ಯುವಕರು ಹಾಗೂ ರಾಮನಗರದ ತಂಡದಿಂದ ಆಕರ್ಷಕ ದಫ್ ನಡೆಯಿತು. ಫಕೀರರ ಝರಬ್ ಮೆರವಣಿಗೆಯಲ್ಲಿ ಸಾಗಿದರು.

ಧಾರ್ಮಿಕ ಪ್ರವಚನ ಸೋಮವಾರಪೇಟೆ ಹನಫಿ ಜಾಮಿಯಾ ಮಸೀದಿಯ ಖತೀಬರಾದ ಆಝಂ ರಝಾ ನಡೆಸಿದರು. ಕಾಜೂರ್ ಹುಲ್ಲೇಹಳ್ಳಿ ಹಝ್ರತ್ ನ ಶಂಸುದ್ದೀನ್ ಝರ್ರಿ, ಮೈಸೂರಿನ ಯಾಸೀರ್ ಅಖ್ತಾರಿ ಅವರು ಪ್ರವಚನ ನೀಡಿದರು. ಸಾರ್ವಜನಿಕರಿಗೆ ಮಸೀದಿಯಲ್ಲಿ ಅನ್ನದಾನ ನಡೆಯಿತು.

ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಬಷೀರ್, ಉಪಾಧ್ಯಕ್ಷ ರಹಿಂ ಬೇಗ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಚಿ ಇನಾಯತ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT