ವಿರಾಜಪೇಟೆ: ಸಮೀಪದ ಬಿಟ್ಟಂಗಾಲ ವಿ.ಬಾಡಗದ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಕಂಪನಿ ಸಹ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಹೈಪ್ಲೈಯರ್ಸ್ ಕಪ್–2025ನಲ್ಲಿ 4 ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.

ವಿ. ಬಾಡಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯಗಳಿಸಿದ ಕೊಂಗಂಡ, ಕುಪ್ಪಂಡ, ಚೇಂದಿರ ಮತ್ತು ತೀತಿಮಾಡ ತಂಡಗಳು ನಾಲ್ಕರ ಹಂತಕ್ಕೆ ಮುನ್ನಡೆದವು.

ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಂಗಂಡ ತಂಡವು ಅಪ್ಪಂಡೇರಂಡ ತಂಡವನ್ನು 4–1 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಮೋಕ್ಷಿತ್ 2ನೇ ಮತ್ತು 20ನೇ ನಿಮಿಷದಲ್ಲಿ ಹಾಗೂ ತಂಡದ ಆಟಗಾರ ರಚನ್ 42ನೇ ಮತ್ತು 48ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೆಲುವಿನೆಡೆಗೆ ಕೊಂಡೊಯ್ದರು. ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ದೇಶ್ ಪೂವಯ್ಯ 23ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕುಪ್ಪಂಡ ತಂಡವು ಕಳ್ಳಿಚಂಡ ತಂಡವನ್ನು 4–0 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ 31ನೇ ನಿಮಿಷದಲ್ಲಿ ಅತಿಥಿ ಆಟಗಾರ ಅಯ್ಯಪ್ಪ, 45ನೇ ನಿಮಿಷದಲ್ಲಿ ಮತ್ತೋರ್ವ ಅತಿಥಿ ಆಟಗಾರ ಧ್ಯಾನ್, 48ನೇ ನಿಮಿಷದಲ್ಲಿ ದೇವಯ್ಯ ಮತ್ತು 49ನೇ ನಿಮಿಷದಲ್ಲಿ ತಂಡದ ಕಾರ್ಯಪ್ಪ ಗೋಲು ದಾಖಲಿಸಿ ಗೋಲಿನ ಅಂತರ ಹೆಚ್ಚಿಸಿದರು.

3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೇಂದಿರ ತಂಡವು ಮಳವಂಡ ತಂಡವನ್ನು 3–1 ಗೋಲುಗಳಿಂದ ಪರಾಭವಗೊಳಿಸಿ ಸೆಮಿಫೈನಲ್ಗೆ ಪ್ರವೇಶಿಸಿತು. ಚೇಂದಿರ ತಂಡದ ಪರವಾಗಿ 15ನೇ ನಿಮಿಷದಲ್ಲಿ ಅತಿಥಿ ಆಟಗಾರ ದೀಪಕ್, 29ನೇ ಮತ್ತು 33ನೇ ನಿಮಿಷದಲ್ಲಿ ಚಿಣ್ಣಪ್ಪ ಗೋಲು ಬಾರಿಸಿದರೆ, ಮಳವಂಡ ತಂಡದ ಪರವಾಗಿ ತಕ್ಷಿತ್ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತೀತಿಮಾಡ ತಂಡವು ಚೇಂದಂಡ ತಂಡವನ್ನು 4–2 ಗೋಲುಗಳಿಂದ ಶೂಟೌಟ್ನಲ್ಲಿ ಸೋಲಿಸಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು. ಪಂದ್ಯದ ದ್ವಿತೀಯಾರ್ಧದ ಅವಧಿ ಕೊನೆಗೊಳ್ಳುವಾಗ ಉಭಯ ತಂಡಗಳು ತಲಾ ಒಂದೊಂದು ಫೀಲ್ಡ್ ಗೋಲು ದಾಖಲಿಸಿದ್ದರಿಂದ ಪಂದ್ಯ ಡ್ರಾ ಗೊಂಡಿತ್ತು. ಇದರಿಂದ ಶೂಟೌಟ್ ನಿಯಮಾವಳಿ ಅಳವಡಿಸಿದಾಗ ತೀತಿಮಾಡ ತಂಡದ ಪರವಾಗಿ 3 ಗೋಲುಗಳು ದಾಖಲಾದರೆ, ಪರಾಜಿತ ತಂಡದ ಪರವಾಗಿ ಏಕೈಕ ಗೋಲು ದಾಖಲಾಯಿತು. ಇದಕ್ಕೂ ಮೊದಲು ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ನಿತಿನ್ 13ನೇ ನಿಮಿಷದಲ್ಲಿ ಮತ್ತು ಪರಾಜಿತ ತಂಡದ ಪರ ಅತಿಥಿ ಆಟಗಾರ ಪೊನ್ನಣ್ಣ 42ನೇ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.