ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆ ಮೆರೆದ ಅಂಚೆ ಇಲಾಖೆ ಸಿಬ್ಬಂದಿ

Published 25 ಫೆಬ್ರುವರಿ 2024, 4:27 IST
Last Updated 25 ಫೆಬ್ರುವರಿ 2024, 4:27 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದ ಅಂಚೆ ಕಚೇರಿಯಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದನ್ನು ಅಂಚೆ ಕಚೇರಿ ಸಿಬ್ಬಂದಿ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ವಿರಾಜಪೇಟೆ ಪಟ್ಟಣದ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಬಳಕೆಗಾಗಿ ವ್ಯವಸ್ಥೆಗೊಳಿಸಿದ ಟೇಬಲ್ ಮೇಲೆ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನೊಳಗೊಂಡ ಕೈಚೀಲವೊಂದು ಯಾರೋ ಬಿಟ್ಟು ಹೋಗಿರುವುದು ಕಚೇರಿಯ ಸಿಬ್ಬಂದಿಯಾದ ಗಣಪತಿ ಹಾಗೂ ನಾಗು ನಾಯಕ್ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಈ ವಿಚಾರವನ್ನು ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಪಟ್ಟಣದ ಸುಂಕದಕಟ್ಟೆಯ ನಿವಾಸಿ ಅಶ್ವಿನಿ ಎಂಬುವವರಿಗೆ ಸೇರಿದ ಕೈಚೀಲ ಎಂದು ತಿಳಿದು ಬಂತು.

ಕೂಡಲೇ ಸಿಬ್ಬಂದಿ ಅಶ್ವಿನಿ ಅವರನ್ನು ಕಚೇರಿಗೆ ಕರೆಸಿ ಚಿನ್ನಾಭರಣ ಮತ್ತು ನಗದನ್ನು ಒಳಗೊಂಡ ಕೈಚೀಲವನ್ನು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಅಂಚೆ ಇಲಾಖೆ ಸಿಬ್ಬಂದಿ  ಈ ಕಾರ್ಯಕ್ಕೆ ಸಾರ್ವಜನಿರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT