ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ದಸರಾ ಕಚೇರಿ ಉದ್ಘಾಟನೆ

ಸರ್ಕಾರದಿಂದ ದಸರಾಕ್ಕೆ ಉತ್ತಮ ಅನುದಾನ ದೊರಕುವ ನಿರೀಕ್ಷೆ: ಶಾಸಕ
Published : 23 ಸೆಪ್ಟೆಂಬರ್ 2024, 4:54 IST
Last Updated : 23 ಸೆಪ್ಟೆಂಬರ್ 2024, 4:54 IST
ಫಾಲೋ ಮಾಡಿ
Comments

ಮಡಿಕೇರಿ: ಶಾಸಕ ಡಾ.ಮಂತರ್‌ಗೌಡ ಅವರು ಭಾನುವಾರ ನಗರದಲ್ಲಿ ದಸರಾ ಕಚೇರಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಮಡಿಕೇರಿಯಲ್ಲಿ ಈ ವರ್ಷ ನಾಡಹಬ್ಬವನ್ನು ವಿಜೃಂಭಣೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ’ ಎಂದು ತಿಳಿಸಿದರು.

ಸರ್ಕಾರದಿಂದ ಮಡಿಕೇರಿ ದಸರಾಕ್ಕೆ ಉತ್ತಮ ಅನುದಾನ ದೊರಕುವ ನಿರೀಕ್ಷೆ ಇದೆ. ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ಮತ್ತು ಯುವ ದಸರಾದೊಂದಿಗೆ ಈ ಬಾರಿ ಕಾಫಿ ಜಿಲ್ಲೆಯನ್ನು ಪ್ರತಿಬಿಂಬಿಸುವ ಕಾಫಿ ದಸರಾವನ್ನೂ ಕೂಡ ಆಯೋಜಿಸಲಾಗಿದೆ. ಕಾಫಿ ಕೃಷಿಕರಿಂದ ಇದಕ್ಕೆ ಉತ್ತಮ ಸ್ಪಂದನ ಕೂಡ ದೊರಕಿದೆ’ ಎಂದರು.

ದಶಮಂಟಪಗಳ ಶೋಭಾಯಾತ್ರೆಯೊಂದಿಗೆ 9 ದಿನಗಳ ಕಾಲ ನಗರದಲ್ಲಿ ವಿಜೃಂಭಣೆಯ ದಸರಾ ಉತ್ಸವ ಆಯೋಜನೆಗಾಗಿ ಸಕಲ ಸಿದ್ಧತೆಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್, ಖಜಾಂಚಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ನಗರಸಭೆಯ ಪೌರಾಯುಕ್ತ ರಮೇಶ್, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಮಹೇಶ್ ಜೈನಿ, ಶ್ವೇತಾ ಪ್ರಶಾಂತ್, ಸಬಿತಾ, ಅಮೀನ್ ಮೊಯಿಸಿನ್, ಶ್ವೇತಾ, ಮನ್ಸೂರ್, ದಸರಾ ಸಮಿತಿ ಮುಖಂಡರಾದ ಬಿ.ಎಂ.ರಾಜೇಶ್, ಎ.ಸಿ.ದೇವಯ್ಯ, ಪಿ.ಡಿ.ಪೊನ್ನಪ್ಪ, ವೀಣಾಕ್ಷಿ, ಮೀನಾಜ್, ತೆನ್ನೀರ ಮೈನಾ ಭಾಗವಹಿಸಿದ್ದರು.

ಶ್ರೀಕೃಷ್ಣ ಉಪಾಧ್ಯಾಯ ಅವರು ಗಣಪತಿ ಮತ್ತು ದುರ್ಗಾ ಪೂಜಾ ಕೈಂಕರ್ಯ ನೆರವೇರಿಸಿದರು.

9 ದಿನಗಳ ಕಾಲ ಆಯೋಜನೆ ದಸರಾ ಉತ್ಸವ ಆಯೋಜನೆಗಾಗಿ ಸಕಲ ಸಿದ್ಧತೆ

ಅ. 8ರಂದು ಮಡಿಕೇರಿಯಲ್ಲಿ ಮಹಿಳಾ ದಸರೆ ಮಡಿಕೇರಿ: ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ. 8ರಂದು 7ನೇ ವರ್ಷದ ಮಹಿಳಾ ದಸರಾವನ್ನು ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಮತ್ತು ಮಹಿಳಾ ದಸರಾ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ. ಮೆಹಂದಿ ಹಾಕುವುದು ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಒಂಟಿಕಾಲಿನ ಓಟ ಕಪ್ಪೆ ಜಿಗಿತ ಕೇಶವಿನ್ಯಾಸ ಗಾರ್ಭ ನೖತ್ಯ ಸೀರಿಗೆ ನಿಖರ ಬೆಲೆ ಹೇಳುವುದು  60 ವರ್ಷ ತುಂಬಿದವರಿಗೆ ಅಜ್ಜಿ ಜತೆ ಮೊಮ್ಮಕ್ಕಳ ನಡಿಗೆ ವಾಲಗತ್ತಾಟ್ ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು ಬಲೂನ್ ಗ್ಲಾಸ್ ಸ್ಪರ್ಧೆ ಬಾಂಬ್ ಇನ್ ದಿ ಸಿಟಿ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇಕಪ್ ಮಾಡುವ ಸ್ಪರ್ಧೆ ಕೇಶವಿನ್ಯಾಸ ಮೆಹಂದಿ ಸ್ಪರ್ಧೆಗಳಿಗೆ  ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಅ 8 ರಂದು ಮಹಿಳಾ ದಸರಾ ದಿನದಂದೇ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿ ಪಾಲ್ಗೊಳ್ಳಬಹುದು. ಮಾಹಿತಿಗೆ ಮೊ: 9535898352 9483785810 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗೋಣಿಕೊಪ್ಪ ದಸರಾ ಜನೋತ್ಸವ; ಹಲವು ಸ್ಪರ್ಧೆಗಳ ಆಯೋಜನೆ ಮಡಿಕೇರಿ: ಶ್ರೀ ಕಾವೇರಿ ದಸರಾ ಸಮಿತಿಯ ದಸರಾ ಜನೋತ್ಸವದಲ್ಲಿ ಹಲವು ಸ್ಪರ್ಧೆಗಳು ನಡೆಯಲಿವೆ. ಅ.5ರಂದು ಬೆಳಿಗ್ಗೆ 8 ಗಂಟೆಗೆ ಗೋಣಿಕೊಪ್ಪಲು ದಸರಾ ಮೈದಾನದಲ್ಲಿ ನಡೆಯುವ ಯುವ ದಸರಾದಂದು ಎಲ್ಲಾ ವಯೋಮಾನದವರಿಗಾಗಿ ಜಿಲ್ಲಾ ಮಟ್ಟದ ಸೈಕ್ಲಾಥಾನ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 14 ವರ್ಷ ಒಳಗಿನ ಬಾಲಕರ ವಿಭಾಗ 15 ರಿಂದ 18 ವರ್ಷದೊಳಗಿನ ಬಾಲಕರ ವಿಭಾಗ 18 ವರ್ಷ ತುಂಬಿದ ಎಲ್ಲಾ ವಯೋಮಾನದವರಿಗಾಗಿ ಮತ್ತು ಮಹಿಳೆಯರಿಗೆ ಎಲ್ಲಾ ವಯೋಮಾನದವರಿಗೆ ಮುಕ್ತ ಅವಕಾಶವಿದ್ದು ಅವರಿಗಾಗಿ ಸೈಕ್ಲೊಥಾನ್ ಸ್ಪರ್ಧೆಗಳು ಇರಲಿವೆ. ಮಧ್ಯಾಹ್ನ 2 ಗಂಟೆಗೆ ಕಾವೇರಿ ಕಲಾವೇದಿಕೆ ಬಳಿ 21 ವರ್ಷ ವಯೋಮಾನದೊಳಗಿನ ಯುವಕ ಹಾಗೂ ಯುವತಿಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ ಇರುತ್ತದೆ. ಏಳು ಜನರ ಒಂದು ತಂಡವು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನೋಂದಣಿಗಾಗಿ ತಮ್ಮ ಹೆಸರುಗಳನ್ನು ಶ್ರೀ ಶರತ್ ಕಾಂತ್ ಮೊ: 9449260053 ಅಥವಾ ರಮೇಶ್ ಮೊ: 7760803783 ಇವರಿಗೆ ಕಳುಹಿಸಬಹುದ. ನೋಂದಣಿಗೆ ಕೊನೆಯ ದಿನ ಸೆ. 30 ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT