ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕೊಡವ ಕೌಟುಂಬಿಕ ಹಾಕಿ ಟೂರ್ನಿ ಕಲ್ಲಂಗಡ ವಿರುದ್ಧ ಚೆಕ್ಕೆರ ತಂಡಕ್ಕೆ ಜಯ

ಚೆರಿಯಪರಂಬುವಿನಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿ
Last Updated 26 ಮಾರ್ಚ್ 2023, 7:48 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು): ಚೆಕ್ಕೆರ ತಂಡದವರು ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಲ್ಲಂಗಡ ತಂಡ ವನ್ನು 6-2 ಗೋಲುಗಳಿಂದ ಮಣಿಸಿತು.

ಆತಿಥೇಯ ಅಪ್ಪಚೆಟ್ಟೋಳಂಡ ತಂಡ 2–0ರಲ್ಲಿ ನಾಳಿಯಂಡ ತಂಡವನ್ನು ಸೋಲಿಸಿತು. ನಂಬಡ ಮಂಡ ತಂಡ 4-0ರಲ್ಲಿ ಬಾಚಮಂಡ ವಿರುದ್ಧ, ಮಣವಟ್ಟಿರ ತಂಡ 3–0ರಿಂದ ಕುಂಚೆಟ್ಟಿರ ಎದುರು ಗೆದ್ದರೆ, ಕೋದಂಡ ತಂಡ 5-4ರಲ್ಲಿ ಮಾಪಣಮಾಡ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ನುಚ್ಚಿಮಣಿಯಂಡ 4-2 ಅಂತರ ದಿಂದ ಕೇಳಪಂಡ ವಿರುದ್ಧ, ಪುಲ್ಲಂಗಡ ತಂಡದವರು 4-0ರಲ್ಲಿ ಬೇಪಡಿ ಯಂಡ ತಂಡದ ವಿರುದ್ಧ ಗೆಲುವು ಪಡೆದರು. ನಾಪಂಡ ತಂಡದವರು 2-1ರಲ್ಲಿ ಮರುವಂಡ ತಂಡದ ವಿರುದ್ಧ, ಚೆಟ್ಟಿಯಾರಂಡ ತಂಡವು 3-0ರಿಂದ ಬಿದ್ದಂಡ ತಂಡದ ವಿರುದ್ಧ, ಪೊನ್ನೋಲತಂಡ ತಂಡವು 2-1ರಿಂದ ಪಟ್ರಪಂಡ ತಂಡದ ವಿರುದ್ಧ, ಚಂದುರ ತಂಡವು 3–0ರಲ್ಲಿ ತಾಪಂಡ ತಂಡದ ವಿರುದ್ಧ, ವಾಟೇರಿರ ತಂಡವು 3-1 ಅಂತರದಿಂದ ಕೋಳೆರ ತಂಡದ ಎದುರು ಜಯ ಸಾಧಿಸಿದವು.

ಮೇರಿಯಂಡ ತಂಡವು 5-0 ಅಂತರದಿಂದ ಬೊಪ್ಪಂಡ ತಂಡದ ವಿರುದ್ಧ, ಕರ್ತಮಾಡ ತಂಡವು 3-0ರಿಂದ ಪಾಲಂದಿರ ತಂಡದ ವಿರುದ್ಧ, ಬೊಳಕಾರಂಡ ತಂಡವು 3- 1ರಿಂದ ನಾಮೆರ ತಂಡದ ವಿರುದ್ಧ, ಬುಡ ತಂಡವು 2-1ರಲ್ಲಿ ಕೇಲೇಟಿರ ಎದುರು, ಮುರುವಂಡ 4-0 ಅಂತರದಿಂದ ಅಚ್ಚಾಂಡಿರ ವಿರುದ್ಧ, ಅಮ್ಮಾತಂಡ ತಂಡವು 6-2 ಅಂತರದಿಂದ ತೀತಮಡ ತಂಡದ ವಿರುದ್ಧ, ಪುಟ್ಟಿಚಂಡ ತಂಡವು 4-0 ಗೋಲುಗಳಿಂದ ಬಾಚಿನಾಡಂಡ ತಂಡದ ವಿರುದ್ಧ, ಕಂಗಾಡ ತಂಡವು 2-1 ಗೋಲಿನಿಂದ ಮಾಚಿಮಡ ತಂಡದ ವಿರುದ್ಧ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿದವು. ನಾಳಿಯಂಡ, ನಂಬಡ ಮಂಡ, ಮಣವಟ್ಟಿರ, ಕೋದಂಡ, ನುಚ್ಚಿಮಣಿಯಂಡ, ಪುಲ್ಲಂಗಡ ಸೇರಿ 21 ತಂಡಗಳು ಮುನ್ನಡೆ ಪಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT