ಮಡಿಕೇರಿ: ಅಧ್ಯಯನದತ್ತ ತಮಗೆ ಆಸಕ್ತಿ ಮೂಡಿದ ಕ್ಷಣದಿಂದ ಆರಂಭಿಸಿ ಬೂಕರ್ ಪ್ರಶಸ್ತಿಯ ಗೌರವ ಪಡೆಯುವ ವರೆಗೆ ಇಟ್ಟ ಒಂದೊಂದೇ ಹೆಜ್ಜೆಗಳು, ಎದುರಾದ ಸವಾಲುಗಳು, ಮುಂದಿನ ಗುರಿಗಳ ಕುರಿತು ಮುಕ್ತವಾಗಿ ಮಾತನಾಡಿದರು ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಭಾಸ್ತಿ.

ಕೊಡಗು ಪತ್ರಕರ್ತರ ಸಂಘವು ಇಲ್ಲಿನ ‘ಲಾಲಿ ಪೆಟಲ್’ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

‘ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಭಾಷೆಯಲ್ಲಿ ನಡೆಯುತ್ತಿರುವ ಭಾಷಾಂತರ ತೀರಾ ಕಡಿಮೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. ‘ಇನ್ನಷ್ಟು ಕನ್ನಡ ಕೃತಿಗಳು ಇತರ ಭಾಷೆಗಳಿಗೆ ಹಾಗೂ ಇತರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರವಾಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಇಲ್ಲಿನ ಕೊಡಗು ವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗ ಶಾಲೆಯ ‘ದಿಕ್ಸೂಚಿ’ ಎಂಬ ಪುರವಣಿಗೆ ಬರೆದುಕೊಡುವಂತೆ ಶಿಕ್ಷಕರು ಹೇಳುತ್ತಿದ್ದರು. ಆಗಿನಿಂದಲೇ ನನಗೆ ಒಂದು ನಿಗದಿತ ಸಮಯದೊಳಗೆ ಸೃಜನಶೀಲವಾಗಿ ಬರೆಯುವುದು ಅಭ್ಯಾಸವಾಗತೊಡಗಿತು. ಜೊತೆಗೆ, ತಾತ ಡಾ.ನಂಜುಂಡೇಶ್ವರ ಅವರ ಗ್ರಂಥಾಲಯದಲ್ಲಿದ್ದ ಹಳೆಯ ಪುಸ್ತಕಗಳು ನನ್ನನ್ನು ಅಧ್ಯಯನಕ್ಕೆ ಸೆಳೆದವು. ದೊಡ್ಡಮ್ಮ (ತಾಳ್ತಜೆ ವಸಂತಕುಮಾರ್ ಅವರ ಪತ್ನಿ) ವಿ.ಕೆ.ಮಣಿಮಾಲಿನಿ ಸಹ ಬರಹಗಾರ್ತಿಯಾಗಿದ್ದರು’ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

‘ಪತ್ರಕರ್ತೆಯಾಗಿ ಸ್ವಲ್ಪ ಕಾಲ ಕೆಲಸ ಮಾಡಿ, ಭಾಷಾಂತರದ ಕಡೆಗೆ ಗಮನ ಹರಿಸಿದೆ. 2012ರಲ್ಲಿ ಕೊಡಗಿನ ಗೌರಮ್ಮ ಅವರ ಜನ್ಮ ಶತಮಾನೋತ್ಸವದ ವೇಳೆ ಅವರ ಕಥೆಗಳನ್ನು ಓದಿ, ಅದನ್ನು ಭಾಷಾಂತರ ಮಾಡಿದೆ. ನಂತರ, ಶಿವರಾಮಕಾರಂತ ಅವರ ‘ಅದೇ ಊರು ಅದೇ ಮರ’ ಕೃತಿಯನ್ನು ಭಾಷಾಂತರಿಸಿದೆ. ನಂತರ, ಭಾನುಮುಷ್ತಾಕ್ ಅವರ ಕಥೆಗಳ ಪೈಕಿ ನನಗಿಷ್ಟವಾದ ಕಥೆಗಳನ್ನಷ್ಟೇ ಆಯ್ದುಕೊಂಡು ಭಾಷಾಂತರ ಮಾಡಿದೆ’ ಎಂದರು.

‘ಮುಖ್ಯವಾಗಿ, ಕೃತಿ ಭಾಷಾಂತರಕಾರರಿಗೆ ಇಷ್ಟವಾಗಬೇಕು. ಆಗ ಮಾತ್ರ ಸಮರ್ಥವಾದ ಭಾಷಾಂತರ ಕೃತಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ನನಗಿಷ್ಟ ಬಂದ ಕಥೆಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಭಾಷಾಂತರ ಮಾಡಿದೆ’ ಎಂದು ಹೇಳಿದರು.

‘ನನಗೆ ಭಾಷೆಗಿಂತಲೂ ಮುಖ್ಯವಾಗಿ ಪ್ರಮುಖ ಸವಾಲು ಎನಿಸಿದ್ದು ಭಾನುಮುಷ್ತಾಕ್ ಅವರ ಕಥೆಗಳಲ್ಲಿದ್ದ ಸಾಂಸ್ಕೃತಿಕ ಅಂಶಗಳು. ಈ ಅಂಶಗಳನ್ನು ಕೂಲಂಕಷವಾಗಿ ಅರಿತುಕೊಂಡೇ ಭಾಷಾಂತರ ಮಾಡಬೇಕಾಯಿತು. ಈ ಬಗೆಯ ಸವಾಲುಗಳು ನನಗೆ ಕಾರಂತರು ಮತ್ತು ಕೊಡಗಿನ ಗೌರಮ್ಮ ಕೃತಿಗಳ ಭಾಷಾಂತರದ ವೇಳೆ ಎದುರಾಗಲಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕೇವಲ ಪದಗಳನ್ನಷ್ಟೇ ಅನುವಾದ ಮಾಡುವುದು ಭಾಷಾಂತರ ಅಲ್ಲ’ ಎಂದು ಪ್ರತಿಪಾದಿಸಿದ ಅವರು, ‘ಭಾಷಾಂತರ ಎನ್ನುವುದು ಪದಶಃ ಅನುವಾದಕ್ಕೆ ಬದಲಾಗಿ ಭಾವಾನುವಾದವಾಗಿದೆ’ ಎಂದು ಹೇಳಿದರು.

‘ಬೂಕರ್ ಪ್ರಶಸ್ತಿ ದೊರಕುವ ನಿರೀಕ್ಷೆ ನಿಜಕ್ಕೂ ಇರಲಿಲ್ಲ. ಪ್ರಕಾಶಕರ ಆಹ್ವಾನದ ಮೇರೆಗೆ ಲಂಡನ್ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ತೆರಳಿದ್ದೆ. ಪ್ರಶಸ್ತಿ ಘೋಷಣೆಯಾದ ಕ್ಷಣ ಮಾತನಾಡಲು ತೊಡಗಿದಾಗ ಡಾ.ರಾಜ್ಕುಮಾರ್ ಅವರು ಹಾಡಿದ ‘ಜೇನಿನ ಹೊಳೆಯೋ’ ಹಾಡನ್ನು ಆ ಕ್ಷಣದಲ್ಲಿ ಮನಸ್ಸಿಗೆ ತೋಚಿದಂತೆ ಉಲ್ಲೇಖಿಸಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಜಗತ್ತಿನದಾದ್ಯಂತ ಪ್ರಸಿದ್ಧಿ ಪಡೆಯಿತು’ ಎಂದು ಪ್ರಶಸ್ತಿ ಘೋಷಣೆಯಾದಾಗಿನ ರೋಮಾಂಚಣದ ಕ್ಷಣಗಳನ್ನು ನೆನಪಿಸಿಕೊಂಡರು.

ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಭಾಗವಹಿಸಿದ್ದರು.

‘ಭಾಷಾಂತರ ನಡೆಯುತ್ತಿದೆ ಸ್ವಂತ ರಚನೆಯೂ ಇದೆ’

ಹೆಗ್ಗೋಡು ಗ್ರಾಮದ ಸಮುದ್ಯತಾ ವೆಂಕಟರಾಮು ಅವರು ರಚಿಸಿರುವ ‘ಇದೇ ಅಂದರೆ ಇದೆ ಇಲ್ಲ ಎಂದರೆ ಇಲ್ಲ’ ಕೃತಿಯನ್ನುಈಗ ಇಂಗ್ಲಿಷ್ಗೆ ಅನುವಾದ ಮಾಡುತ್ತಿರುವೆ. ಜೊತೆಗೆ ಸ್ವಂತ ಕೃತಿಯ ರಚನೆ ಕಾರ್ಯವೂ ಬಾಕಿ ಇದೆ’ ಎಂದು ದೀಪಾ ಭಾಸ್ತಿ ಹೇಳಿದರು.

ಕುಟುಂಬದವರ ಪ್ರೋತ್ಸಾಹ ನೆನೆದ ಲೇಖಕಿ

‘ಅಪ್ಪ ಪ್ರಕಾಶ್ ತಾಯಿ ಸುಧಾಭಾಸ್ತಿ ಮತ್ತು ಪತಿ ಚೆಟ್ಟೀರ ನಾಣಯ್ಯ ನೀಡುತ್ತಿರುವ ಪ್ರೋತ್ಸಾಹ ಬೆಂಬಲ ಅಗಾಧವಾದುದು. ಅವರ ಪ್ರೋತ್ಸಾಹದಿಂದಲೇ ನನಗೆ ಭಾಷಾಂತರ ಕಾರ್ಯ ಮಾಡಲು ಸಾಧ್ಯವಾಯಿತು’ ಎಂದು ಲೇಖಕಿ ದೀಪಾ ಭಾಸ್ತಿ ನೆನೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.