ಗುರುವಾರ , ಫೆಬ್ರವರಿ 27, 2020
19 °C

ಅಪಘಾತ: ಕಾಡು ಬೆಕ್ಕು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಗರದ ಸೇನಾ ಕ್ಯಾಂಟೀನ್ ಬಳಿ ಶನಿವಾರ ಬೆಳಿಗ್ಗೆ ಚಿರತೆಯನ್ನು ಹೋಲುವ ಕಾಡು ಬೆಕ್ಕು ವಾಹನ ಅಪಘಾತದಿಂದ ಸಾವನ್ನಪ್ಪಿದೆ.

ರಾತ್ರಿಯೇ ವಾಹನಕ್ಕೆ ಸಿಲುಕಿ ಕಾಡುಬೆಕ್ಕು ಸಾವನ್ನಪ್ಪಿತ್ತು. ಬೆಳಿಗ್ಗೆ ಸ್ಥಳೀಯರಿಗೆ ಇದನ್ನು ಗಮನಿಸಿ ಚಿರತೆಯ ಮರಿಯೇ ಸಾವನ್ನಪ್ಪಿದೆ ಭಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಅಪರಿಚಿತರೊಬ್ಬರು ಈ ಪ್ರಾಣಿಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಬಳಿಕ ಅರಣ್ಯ ಇಲಾಖೆ ಈ ಬಗ್ಗೆ ಮಾಹಿತಿ ಪಡೆದು ಬೆಕ್ಕನ್ನು ವಶಕ್ಕೆ ಪಡೆದುಕೊಂಡಿದೆ.

ಕಳೆದ ತಿಂಗಳು ಕಾಡುಬೆಕ್ಕುಗಳ ಗುಂಪು ನೆಹರೂ ಮಂಟಪದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದವು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು