ಬಳಕೆಗೆ ಬಾರದ ನೂತನ ಬಸ್ ನಿಲ್ದಾಣ

7
ಮಡಿಕೇರಿ ಹಳೇ ಬಸ್‌ ನಿಲ್ದಾಣದ ಜಾಗದಲ್ಲೇ ಪ್ರಯಾಣಿಕರ ಪರದಾಟ

ಬಳಕೆಗೆ ಬಾರದ ನೂತನ ಬಸ್ ನಿಲ್ದಾಣ

Published:
Updated:
Deccan Herald

ಮಡಿಕೇರಿ: ನಗರದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದರೂ, ಪ್ರಯಾಣಿಕರು ತಂಗುದಾಣವಿಲ್ಲದೆ ಸುಡುಬಿಸಿಲಿನಲ್ಲಿ ಬಸ್‌ಗೆ ಕಾಯುವ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಗುಡ್ಡ ಬಿದ್ದ ಪರಿಣಾಮ ನಿಲ್ದಾಣದ ಕಟ್ಟಡ ತೆರವುಗೊಳಿಸಿ ಬಸ್‌ಗಳನ್ನು ಹೊಸ ನಿಲ್ದಾಣಕ್ಕೆ ಬರುವಂತೆ ನಗರಸಭೆ ಸೂಚಿಸಿತ್ತು. ಆದರೆ, ಹೊಸ ನಿಲ್ದಾಣದಲ್ಲಿ ಬಸ್‌ ಸೌಲಭ್ಯ ಕಡಿಮೆಯಿರುವುದರಿಂದ ಇತ್ತ ಪ್ರಯಾಣಿಕರು ಮಾತ್ರ ಹಳೇ ನಿಲ್ದಾಣದ ಜಾಗದಲ್ಲೇ ಸುಡು ಬಿಸಿಲಿನಲ್ಲಿ ನಿಲ್ಲುವಂತಾಗಿದೆ.

ಹಳೇ ಬಸ್‌ ನಿಲ್ದಾಣದ ಎದುರು ಪ್ರಯಾಣಿಕರನ್ನು ಹತ್ತಿಸಲು ಗೋಣಿ ಕೊಪ್ಪ, ಭಾಗಮಂಡಲ, ವಿರಾಜಪೇಟೆ, ಸಿದ್ದಾಪುರ, ಸೋಮ ವಾರಪೇಟೆಗೆ ತೆರಳುವ ಬಸ್‌ಗಳು ಸಾಲಾಗಿ ಹಳೇ ಬಸ್ ನಿಲ್ದಾಣದ ಎದುರಿನಲ್ಲೇ ನಿಲ್ಲಿಸುತ್ತಿರವ ದೃಶ್ಯಗಳು ಕಾಣುತ್ತಿವೆ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಾದರೂ  ನಗರಸಭೆ ಹಳೇಯ ಬಸ್‌ ನಿಲ್ದಾಣದಲ್ಲಿದ್ದ ಸ್ಥಳದಲ್ಲಿ ತಂಗುದಾಣದ ವ್ಯವಸ್ಥೆ ಮಾಡಿಕೊ ಡಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ನಗರದಿಂದ 1 ಕಿ.ಮೀ ದೂರದ ಲ್ಲಿರುವ ನಿಲ್ದಾಣದಿಂದ ನಗರಕ್ಕೆ ಆಟೊಗಳಲ್ಲಿ ಬರುವ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ. ನೂತನ ಬಸ್ ನಿಲ್ದಾಣಕ್ಕೆ ಬಸ್‌ಗಳು ಹೋಗಲು–ಬರಲು ಮಾರ್ಗಗಳ ಮಾಹಿತಿ ಕೂಡ ನಗರಸಭೆ ನೀಡಿಲ್ಲ ಎಂದು ಬಸ್‌ ಮಾಲೀಕರು ಹೇಳುತ್ತಾರೆ.

‘ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಟ್ಟಡ ಕೆಡವಿ ನೆಲಸಮ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರು ನೂತನ ಬಸ್‌ ನಿಲ್ದಾಣಕ್ಕೆ ಹೋಗಬೇಕಿದೆ. ಹಳೇ ನಿಲ್ದಾಣದಲ್ಲಿ ತಾತ್ಕಾಲಿಕ ತಂಗುದಾಣ ಹಾಗೂ ಶೌಚಾಲಯ ನಿರ್ಮಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ತಿಳಿಸಿದರು.

ಪ್ರಯಾಣಿಕರ ಬಗ್ಗೆ ಯಾರಿಗೂ ಕರುಣೆ ಬಂದಿಲ್ಲ. ಶೌಚಾಲಯವಿಲ್ಲದೆ ವೃದ್ದರು, ಮಹಿಳೆಯರು, ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನಾದರು ನಗರಸಭೆ ಅಥವಾ ಜಿಲ್ಲಾಡಳಿತ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕೆಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜೋಯಪ್ಪ ಆಗ್ರಹಿಸುತ್ತಾರೆ.

‘ಬಸ್‌ಗಾಗಿ ಬಿಸಿಲಿನಲ್ಲಿ ನಿಂತು ಸಾಕಾಗಿದೆ, ಸಂಬಂಧಪಟ್ಟವರು ಸೂಕ್ತ ತಂಗುದಾಣ  ನಿರ್ಮಾಣ ಮಾಡಿಕೊಡಲಿ’ ಎಂದು ಆಗ್ರಹಿಸುತ್ತಾರೆ ಪ್ರಯಾಣಿಕ ಸೌಕತ್‌ ಆಲಿ.

*
ಪ್ರಯಾಣಿಕರ ಹಿತದೃಷ್ಟಿಯಿಂದ ನಗರಸಭೆ ಹಳೆ ಬಸ್ ನಿಲ್ದಾಣದಲ್ಲೇ ಸ್ಥಳಾವ ಕಾಶ ಮಾಡಿಕೊಟ್ಟರೆ ಉತ್ತಮ.
–ಜೋಯಪ್ಪ, ಅಧ್ಯಕ್ಷ, ಖಾಸಗಿ ಬಸ್ ಮಾಲೀಕರ ಸಂಘ

*
ಬಸ್‌ಗಾಗಿ ಬಿಸಿಲಿನಲ್ಲಿ ನಿಂತು ಸಾಕಾಗಿದೆ, ಸಂಬಂಧಪಟ್ಟ ಇಲಾಖೆಗಳು ಪ್ರಯಾಣಿಕರಿಗೆ ಸೂಕ್ತ ತಂಗುದಾಣ ನಿರ್ಮಾಣ ಮಾಡಿಕೊಡಲಿ.
ಸೌಕತ್‌ ಆಲಿ, ಪ್ರಯಾಣಿಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !