ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ: ಕುಂಬೂರು ಪವಿತ್ರ ಕುಟುಂಬ ಚರ್ಚ್ ಲೋಕಾರ್ಪಣೆ

Published 23 ಮೇ 2024, 4:17 IST
Last Updated 23 ಮೇ 2024, 4:17 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ‘ಪುಟ್ಟ ಗ್ರಾಮದಲ್ಲಿ ದೇವರ ಬಲ ಮತ್ತು ಶಕ್ತಿ ಇದೆ ಎಂಬುದಕ್ಕೆ ಅತ್ಯದ್ಭುತವಾದ ಚರ್ಚ್ ತಲೆ ಎತ್ತಿರುವುದೇ ಸಾಕ್ಷಿ’ ಎಂದು ಮೈಸೂರು ಧರ್ಮ ಕ್ಷೇತ್ರದ ಆಡಳಿತಾಧಿಕಾರಿ ರೆ.ಫಾ. ಬರ್ನಾಡ್ ಮೊರಾಸ್ ಹೇಳಿದರು.

ಸಮೀಪದ ಮಾದಾಪುರ ವ್ಯಾಪ್ತಿಯ ಕುಂಬೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪವಿತ್ರ ಕುಟುಂಬ ಚರ್ಚ್‌ನಲ್ಲಿ ವಿವಿಧ ಧಾರ್ಮಿಕ ವಿದಿವಿಧಾನಗಳನ್ನು ನೆರವೇರಿಸಿದ ನಂತರ ಮಾತನಾಡಿದರು.

‘ಮಡಿಕೇರಿ ವಲಯದ ಶ್ರದ್ಧಾ ಕೇಂದ್ರಗಳಲ್ಲಿ ಒಂದಾಗಿರುವ ಕುಂಬೂರುವಿನ ಪವಿತ್ರ ಕುಟುಂಬ ಚರ್ಚ್‌ಗೆ ನೂರಾರು ವರ್ಷಗಳ ಇತಿಹಾಸವಿದ್ದು, ಈ ಸ್ಥಳಕ್ಕೆ ದೇವರ ಆಶೀರ್ವಾದ, ಶಕ್ತಿ ಇದೆ. ಹತ್ತಾರು ಧರ್ಮಗುರುಗಳ ಮತ್ತು ಭಕ್ತರ ತ್ಯಾಗ, ಪರಿಶ್ರಮ ಮತ್ತು ಭಕ್ತಿಯ ಸಮರ್ಪಣೆ ಇದೆ’ ಎಂದು ಶ್ಲಾಘಿಸಿದರು.

‘ಈ ಚರ್ಚ್ ಸುಮಾರು 56 ಕುಟುಂಬಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಉತ್ತಮ ರೀತಿಯಲ್ಲಿ ಪ್ರಾರ್ಥನೆ, ಬಲಿಪೂಜೆ ನಡೆದು ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನೆರವಾಗಲಿ’ ಎಂದು ಹಾರೈಸಿದರು.

ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ‘ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದಾಗಿದ್ದು, ವಿವಿಧ ಧಾರ್ಮಿಕ ನಂಬಿಕೆ, ಆಚಾರ ವಿಚಾರ, ವೇಷಭೂಷಣ ಬೇರೆ ಬೇರೆಯಾಗಿದ್ದರೂ ಎಲ್ಲಾ ಧರ್ಮಗಳ ಸಾರ ಒಂದೇ. ಬಿಜೆಪಿ ಸರ್ಕಾರದ ಆಡಳಿತ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ₹5 ಕೋಟಿ ಯವರೆಗೆ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು.

ಕುಂಬೂರು ಚರ್ಚ್ ಧರ್ಮಗುರು ರೇ.ಫಾ. ರಾಜೇಶ್ ಮಾತನಾಡಿ, ‘ಈ ಚರ್ಚ್ ಇತಿಹಾಸ ಓದಿದಾಗ ಇದರ ನಿರ್ಮಾಣ ಕಾರ್ಯ ಅಸಾಧ್ಯ ಎನಿಸಿತು. ಆದರೆ ಭಕ್ತರ ಬೇಡಿಕೆ ಮತ್ತು ಸಹಕಾರದಿಂದ ಭವ್ಯವಾದ ಧರ್ಮಕೇಂದ್ರ ಲೋಕಾರ್ಪಣೆಗೊಂಡಿದೆ. 2018ರ ಪ್ರವಾಹ, ಕೋವಿಡ್‌ ಹಿನ್ನೆಲೆಯಲ್ಲಿ ಹಿನ್ನಡೆಯಾಗಿತ್ತು. ಆದರೆ ಅಲ್ಪಾವಧಿಯಲ್ಲಿ ಮೈಸೂರು ಧರ್ಮಕ್ಷೇತ್ರ ಹಾಗೂ ಇತರ ಧಾರ್ಮಿಕ ಕೇಂದ್ರಗಳು, ಭಕ್ತರ ಕೊಡುಗೆಯಿಂದ ಚರ್ಚ್ ನಿರ್ಮಾಣ ಕಾರ್ಯ ಸಂಪನ್ನಗೊಂಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಮೈಸೂರು ಧರ್ಮ ಕ್ಷೇತ್ರದ ರೇ.ಫಾ.ಜಾನ್ ಆಲ್ಬರ್ಟ್ ಮೆಂಡೋನ್ಸಾ, ಹಟ್ಟಿಹೊಳೆ ಧರ್ಮಕೇಂದ್ರದ ಧರ್ಮ ಗುರುಗಳಾದ ಗಿಲ್ಬರ್ಟ್ ಡಿಸಿಲ್ವ, ಜಿಲ್ಲೆ ಸೇರಿದಂತೆ ವಿವಿಧ ದರ್ಮಕೇಂದ್ರಗಳಿಂದ ಆಗಮಿಸಿದ ಧರ್ಮಗುರುಗಳು, ಲಕ್ಷ್ಮೀಜಾಲ ತೋಟದ ಮಾಲೀಕ ಕೊಂಗಡ ವಿನಯ್ ಸೋಮಯ್ಯ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಪ್ಪ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಅಂತೋಣಿ, ದಮಯಂತಿ ಮತ್ತಿತರರು ಇದ್ದರು.

ಚರ್ಚ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ದಾನಿಗಳು ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು.
ಕುಂಬೂರು, ಮಾದಾಪುರ, ಹಟ್ಟಿಹೊಳೆ, ಸುಂಟಿಕೊಪ್ಪ, ಸೋಮವಾರಪೇಟೆ ಸೇರಿದಂತೆ‌ ಜಿಲ್ಲೆಯ ಮೂಲೆಮೂಲೆಗಳಿಂದ ಕ್ರೈಸ್ತರು ಆಗಮಿಸಿದ್ದರು.

ಸುಂಟಿಕೊಪ್ಪ ಸಮೀಪದ ಕುಂಬೂರು ಗ್ರಾಮದಲ್ಲಿ ಲೋಕಾರ್ಪಣೆ ಗೊಂಡ ನಂತರ ವಿವಿಧ ಧರ್ಮಕೇಂದ್ರದ ಧರ್ಮ ಗುರುಗಳು ಆಶೀರ್ವಚಿಸಿದರು
ಸುಂಟಿಕೊಪ್ಪ ಸಮೀಪದ ಕುಂಬೂರು ಗ್ರಾಮದಲ್ಲಿ ಲೋಕಾರ್ಪಣೆ ಗೊಂಡ ನಂತರ ವಿವಿಧ ಧರ್ಮಕೇಂದ್ರದ ಧರ್ಮ ಗುರುಗಳು ಆಶೀರ್ವಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT