ಶನಿವಾರ, ಫೆಬ್ರವರಿ 4, 2023
28 °C

75 ಕಲಾವಿದರು ನಟಿಸಿರುವ ‘ಲೇಲುಳ್ಳಿ ಲೇ ಲೇ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: 75 ಮಂದಿ ಕಲಾವಿದರು ನಟಿಸಿರುವ ಮಹತ್ವದ ‘ಲೇಲುಳ್ಳಿ ಲೇ ಲೇ’ ಕೊಡವ ಆಲ್ಬಂ ಹಾಡು ಭಾನುವಾರ ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ವೇದಿಕೆಯಲ್ಲಿ ಬಿಡುಗಡೆಗೊಂಡಿತು.

‘ಟೀಮ್ ವಿ ಟ್ರೈಬ್ಸ್’ ನಿರ್ಮಾಣದ ಈ ಹಾಡಿಗೆ ಅಭಿಷೇಕ್ ಬಿದ್ದಪ್ಪ ಅಜ್ಜಮಾಡ ಸಾಹಿತ್ಯ ನೀಡಿ, ನಿರ್ದೇಶಿಸಿರುವ ಈ ಹಾಡನ್ನು ‘ವಿ ಟ್ರೈಬ್ಸ್ ಯೂ ಟ್ಯೂಬ್’ ಚಾನಲ್‌ನಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ಕೊಡವ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿ, ಪ್ರಕೃತಿ ಸೌಂದರ್ಯ, ವೀರಪರಂಪರೆ, ಸೇನೆ, ಕ್ರೀಡೆ ಮೊದಲಾದ ಕ್ಷೇತ್ರಗಳ ಸ್ಫೂರ್ತಿದಾಯಕ ಅಂಶಗಳನ್ನು ಒಳಗೊಂಡಿರುವ ಈ ಹಾಡು ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ’ ಎಂದು ಶ್ಲಾಘಿಸಿದರು.

'ಕೊಡವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಕರೆ ನೀಡಿದರು.

ಮುಖಂಡರಾದ ಚೋಕಿರ ಅನಿತಾ ದೇವಯ್ಯ, ಹಾಡಿನ ನಿರ್ದೇಶಕ ಅಭಿಷೇಕ್ ಬಿದ್ದಪ್ಪ ಅಜ್ಜಮಾಡ, ವಿ ಟ್ರೈಬ್ಸ್ ವಿತ್ ಪಾಸಿಟಿವ್ ವೈಬ್ಸ್‌ನ ಸದಸ್ಯರಾದ ಮತ್ರಂಡ ಸ್ಯಾಮ್ ಪೂವಪ್ಪ, ಅಯ್ಯಾರಣಿಯಂಡ ಶಿಲನ್ ಚೋಂದಮ್ಮ, ಮಿಥುನ್ ಮೇದಪ್ಪ ಐಯ್ಯೆಟ್ಟಿರ, ನವೀನ್ ಐಮಣಿಯಂಡ, ರೋಷನ್ ಪೆಮ್ಮಯ್ಯ ಪೆಮ್ಮಂಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು