ದಿನ ಕಳೆದಂತೆ ಹೆಚ್ಚಾದ ನಗರೀಕರಣ
2018 ಮತ್ತು 2019ರಲ್ಲಿ ಭೀಕರ ಪ್ರಾಕೃತಿಕ ವಿಕೋಪ ಸಂಭವಿಸಿದ ಹೊರತಾಗಿಯೂ ಕೊಡಗಿನಲ್ಲಿ ಹೊರಗಿನ ಬಂಡವಾಳ ಷಾಹಿಗಳು ಭೂಮಿ ಖರೀದಿಸಿ ಅದನ್ನು ಪರಿವರ್ತನೆ ಮಾಡಿ ರೆಸಾರ್ಟ್‌ಗಳನ್ನು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ನಗರೀಕರಣವೂ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಇವುಗಳೆಲ್ಲವೂ ಈ ನೆಲಕ್ಕೆ ಭಾರಿ ಬೆದರಿಕೆಗಳೆನಿಸಿದ್ದು ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತರಿಪಡಿಸುವುದರಿಂದ ಈ ರೀತಿಯ ಅನಾಹುತಗಳನ್ನು ತಡೆಯಲು ಸಾಧ್ಯ ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದರು.