ಪೊನ್ನಂಪೇಟೆ: ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಡ ಕೊಡವ ಜನಪದ ಸಾಂಸ್ಕ್ರತಿಕ ನಮ್ಮೆಗೆ ರೂಟ್ಸ್ ಎಜುಕೇಶನ್ ಟ್ರಸ್ಟಿ ಮಲ್ಲಂಗಡ ನಿರನ್ ಉತ್ತಪ್ಪ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಟಿ.ಶೆಟ್ಟಿಗೇರಿಯ ರೂಟ್ಸ್ ಎಜುಕೇಶನ್ ಟ್ರಸ್ಟ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಲ್ಲಂಗಡ ನಿರನ್ ಉತ್ತಪ್ಪ, ‘ಶ್ರೀಯುವಪೀಳಿಗೆಗೆ ಕೊಡವ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ 5 ವರ್ಷಗಳಿಂದ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುತ್ತಿದೆ. ಕಲೆ ಹಾಗೂ ಸಂಸ್ಕೃತಿ ಉಳಿಯಲು ಇಂತಹಾ ಕಾರ್ಯಕ್ರಮಗಳು ಸಹಕಾರಿ’ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ‘ಕೊಡವ ಸಂಸ್ಕ್ರತಿಯನ್ನು ಇನ್ನಷ್ಟು ಪರಿಚಯಿಸಬೇಕಾದಲ್ಲಿ ಸಂಶೋಧನೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಂಶೋಧನೆಗೆ ಅಕಾಡೆಮಿ ಹೆಚ್ಚು ಒತ್ತು ನೀಡಲಿದೆ. ಅಕಾಡೆಮಿಗೆ ಲಭ್ಯವಿರುವ ಅನುದಾನದಲ್ಲಿ ಭಾಷೆ, ಸಂಸ್ಕ್ರತಿ ಮತ್ತು ಸಾಹಿತ್ಯಕ್ಕೆ ಸಂಬಂದಿಸಿದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು .ಎಲ್ಲಾ ಕೊಡವ ಭಾಷಿಕ ಮೂಲನಿವಾಸಿಗಳು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಕೊಡವ ಶಬ್ದಕೋಶವನ್ನು ಹಲವು ಭಾಷೆಗೆ ಅನುವಾದಿಸಿ ಪ್ರಕಟಿಸುವ ಮೂಲಕ ವಿಶ್ವದ ಎಲ್ಲೆಡೆ ಲಭ್ಯವಿರುವಂತೆ ಚಿಂತನೆ ನಡೆಸಲಾಗುತ್ತಿದೆ. ₹5 ಕೋಟಿ ವೆಚ್ಚದಲ್ಲಿ ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣಗೊಳ್ಳಲಿದೆ. ಸಾಂಸ್ಕ್ರತಿಕ ಸಂಶೋಧನಾ ಕೇಂದ್ರ, ವಸ್ತು ಸಂಗ್ರಹಾಲಯ ಕೂಡಾ ರೂಪುಗೊಳ್ಳಲಿದೆ ಎಂದರು.

ಮುಖ್ಯ ಅತಿಥಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಾಜಿರ ಅಯ್ಯಪ್ಪ ಮಾತನಾಡಿ, ಆಟ್ ಪಾಟ್ ಸೇರಿದಂತೆ ಹಲವು ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಂಸ್ಕೃತಿಯ ಬೆಳೆವಣಿಗೆಗೆ ಪ್ರಾಮಾಣಿಕ ಪ್ರಯತ್ನವನ್ನು ಕೂಟವು ಕಳೆದ 7 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾದ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ ಅಪ್ಪಣ್ಣ, ಶಿಕ್ಷಣ ಸಂಯೋಜಕ ಪೋಯಂಗಡ ಅಯ್ಯಪ್ಪ, ಕೊಡವ ಐರಿ ಸಮಾಜದ ಜಿಲ್ಲಾಧ್ಯಕ್ಷ ಮೇಲತಂಡ ರಮೇಶ್ ಹಾಗೂ ಕೋಯವ ಸಮಾಜದ ಜಿಲ್ಲಾಧ್ಯಕ್ಷ ಚಿಲ್ಲಂಡ ದಾದು ಮಾದಪ್ಪ ಕೊಡವ ಸಂಸ್ಕ್ರತಿ ಕುರಿತು ಮಾತನಾಡಿದರು.

ಅಕಾಡೆಮಿ ಸದಸ್ಯರುಗಳಾದ ಪಡಿಞರಂಡ ಪ್ರಭುಕುಮಾರ್, ತೇಲಪಂಡ ಕವನ್ ಕಾರ್ಯಪ್ಪ, ಶಿಕ್ಷಕಿ ನಿರ್ಮಲ ಹರಿಶ್, ಕೂಟದ ನಿರ್ದೇಶಕಿ ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.

ಬೊಳಕಾಟ್, ಉಮ್ಮತಾಟ್, ಕೋಲಾಟ್, ಉರ್ಟಿಕೊಟ್ಟ್ ಆಟ್ ,ಕೊಡವ ಪಾಟ್ ,ವಾಲಗತಾಟ್, ಪರೆಕಳಿ, ಕೊಡವ ನಾಟಕ, ಕೊಡವ ಕವಿಗೋಷ್ಠಿ, ಕೊಡವ ವಿಚಾರಗೋಷ್ಠಿ ನಡೆಯಿತು.

ಕೊಡವ ಅಕಾಡಮಿ ಸದಸ್ಯರುಗಳು ಹಾಗು ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು ಹಾಗು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.