ಸಣ್ಣ ನೀರಾವರಿ ಇಲಾಖೆ ಸೇರಿದ ಕೆರೆಗಳು ಅಪಾಯದಲ್ಲಿಲ್ಲ. ಬಹುತೇಕ ಎಲ್ಲ ಕೆರೆಗಳಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಕುಮಾರಸ್ವಾಮಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ
ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಯಡೂರು ಕೆರೆ ತುಂಬಿದೆ. ಕೆರೆ ಹೂಳು ತೆಗೆದಿರುವ ಕಾರಣ ನೀರಿನ ಸಂಗ್ರಹ ಜಾಸ್ತಿಯಾಗಿದೆ. ತಂತಿ ಬೇಲಿ ಅಥವಾ ರೈಲಿಂಗ್ಸ್ ಅಳವಡಿಸುವುದಕ್ಕೆ ಸರ್ಕಾರ ಅನುದಾನ ಕಲ್ಪಿಸಬೇಕು. ಅನಾಹುತವಾದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮೊದಲೇ ಎಚ್ಚರ ವಹಿಸಬೇಕು.–ಎ.ಸಿ.ಲಿಖಿತ್ ಕೃಷಿಕ ಯಡೂರು
ಸುರಕ್ಷತಾ ಕ್ರಮ ಕೈಗೊಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಯಡೂರು ಗ್ರಾಮದ ಕೆರೆ ಅಪಾಯದಲ್ಲಿದೆ. ಈಗಾಗಲೇ ತುಂಬಿ ಹರಿಯುತ್ತಿದ್ದು ರಸ್ತೆ ಮತ್ತು ಕೆರೆ ಒಂದೇ ರೀತಿಯಲ್ಲಿ ಕಾಣುತ್ತದೆ. ಸಾಕಷ್ಟು ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ರಾಜ್ಯದ ಸಾಕಷ್ಟು ವಾಹನಗಳು ಇಲ್ಲಿ ಬರುತ್ತಿರುವುದರಿಂದ ಅಪಾಯ ಎದುರಾಗುವ ಮುನ್ನ ಸಂಬಂಧಿಸಿದ ಇಲಾಖೆ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳಬೇಕು.–ಬಾಲಕೃಷ್ಣ ಪೂಜಾರಿ ಅಧ್ಯಕ್ಷ ಸೋಮವಾರಪೇಟೆ
ವಾಹನ ಚಾಲಕರು ಮತ್ತು ಮಾಲೀಕರ ಸಂಘ ಮುಂದಾಗುವ ಅನಾಹುತ ತಪ್ಪಿಸಿ ಹೊನ್ನಮ್ಮನೆ ಕೆರೆ ಎದುರು ಭಾಗ ದೊಡ್ಡಮಳ್ತೆಗೆ ಹೋಗುವ ರಸ್ತೆಯಲ್ಲಿ ತಡೆಗೋಡೆ ಇಲ್ಲದ ಕಾರಣ ತುಂಬಾ ಅಪಾಯಕಾರಿಯಾಗಿದೆ. ಕೂಡಲೇ ಕೆರೆ ಸುತ್ತ ತಡೆಗೋಡೆ ನಿರ್ಮಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು.–ಸಿ.ಎಲ್.ವೆಂಕಟೇಶ್ ದೊಡ್ಡಮಳ್ತೆ ಹಿರಿಕರ ಗ್ರಾಮ
ಬಾಣಂತಮ್ಮ ಕೆರೆಗೆ ಬೇಲಿ ನಿರ್ಮಿಸಿ ತುಂಬಾ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾಣಂತಮ್ಮ ಕೆರೆ ಏರಿ ರಸ್ತೆಯಲ್ಲಿ ತಡೆಗೋಡೆ ಇಲ್ಲದೇ ಜನರು ಓಡಾಡಲು ಭಯಪಡುತ್ತಿದ್ದಾರೆ. ಕೂಡಲೇ ಈ ಕೆರೆಗೆ ತಡೆಗೋಡೆ ಅಥವಾ ರಕ್ಷಣಾ ಬೇಲಿ ನಿರ್ಮಿಸಬೇಕು.–ಮಧು ಬೆಂಬಳೂರು ಕೊಡ್ಲಿಪೇಟೆ
ತಡೆಗೋಡೆ ನಿರ್ಮಿಸಿ ಹೊನ್ನಮ್ಮನಕೆರೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕೆರೆಯ ಸುತ್ತ ತಡೆಗೋಡೆ ಇಲ್ಲದೆ ತುಂಬಾ ಅಪಾಯಕಾರಿಯಾಗಿದೆ. ಕೂಡಲೇ ತಡೆಗೋಡೆ ನಿರ್ಮಿಸಿ ಅಪಾಯವನ್ನು ತಪ್ಪಿಸಬೇಕು.–ಕೆ.ಪಿ.ಆದರ್ಶ ಕೂಗೆಕೊಡಿ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.