ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಟಿಕೊಪ್ಪ: ಕರ ವಸೂಲಿ ಅಭಿಯಾನಕ್ಕೆ ಚಾಲನೆ

Published : 24 ಆಗಸ್ಟ್ 2024, 2:21 IST
Last Updated : 24 ಆಗಸ್ಟ್ 2024, 2:21 IST
ಫಾಲೋ ಮಾಡಿ
Comments

ಸುಂಟಿಕೊಪ್ಪ: ಇಲ್ಲಿನ‌‌ ಗ್ರಾಮ ಪಂಚಾಯಿತಿಯ ವೇತನ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ‌ ಪಂಚಾಯಿತಿಯಿಂದ ನೀರಿನ ದರ ಹಾಗೂ ಕರ ವಸೂಲಾತಿ ಅಭಿಯಾನಕ್ಕೆ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಪಿಡಿಒ ವಿ.ಜಿ.ಲೋಕೇಶ್ ಚಾಲನೆ ನೀಡಿದರು.

ಈ ಹಿಂದಿನಿಂದಲೂ ಹಲವು ಮಂದಿ ನೀರಿನ ತೆರಿಗೆ ಹಾಗೂ ಮನೆಯ ಕಂದಾಯವನ್ನು ಪಾವತಿಸದೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಪಂಚಾಯಿತಿ ಸಿಬ್ಬಂದಿಗೆ ವೇತನ, ವಿವಿಧ ವಾರ್ಡ್‌ಗಳಿಗೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯುಂಟಾಗಿದೆ. ಸೆಸ್ಕ್ ಇಲಾಖೆಗೆ ಬೀದಿ ದೀಪ, ನೀರು ಸರಬರಾಜು ವಿದ್ಯುತ್ ಬಿಲ್ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಪಾವತಿಸಬೇಕಾಗಿದ್ದು, ಪಂಚಾಯಿತಿಗೆ ಅನುದಾನದ ಕೊರತೆ ಒಂದೆಡೆಯಾದರೆ, ಮೂಲ ಸೌಲಭ್ಯಗಳಿಗೆ ಬೇಕಾಗಿರುವ ಸಂಪನ್ಮೂಲದ ಕೊರತೆಯು ಸಹ ಬಹಳವಾಗಿ ಕಾಡುತ್ತಿದೆ. ಈ ದಿಸೆಯಲ್ಲಿ ಸಂಪನ್ಮೂಲವನ್ನು ಕ್ರೋಡೀಕರಿಸಬೇಕಾಗಿರುವುದರಿಂದ ಮನೆ ಹಾಗೂ ನೀರಿನ ತೆರಿಗೆಯನ್ನು ಪಾತಿಸುವಂತೆ ಪಂಚಾಯಿತಿ ಸಿಬ್ಬಂದಿ  ಶ್ರೀನಿವಾಸ್ ಹಾಗೂ ಡಿ.ಎಂ.ಮಂಜುನಾಥ್ ಅವರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಗ್ರಾಮಸ್ಥರು ತೆರಿಗೆಯನ್ನು ಪಾವತಿಸುವ ಮೂಲಕ ಪಂಚಾಯಿತಿಯ ಮೂಲ ಸಲವತ್ತು, ವೇತನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಗ್ರಾಮಸ್ಥರಲ್ಲಿ ಮನವಿಕೊಂಡಿದ್ದಾರೆ.

ಈ ಸಂದರ್ಭ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಶಬ್ಬೀರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT