ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಕಾಡಂಚಿನ ವಣಚಲು ಗ್ರಾಮದ ಮತಗಟ್ಟೆಯಲ್ಲಿ ಮೂಲಸೌಕರ್ಯ ಇಲ್ಲ; ಆರೋಪ

Published 26 ಏಪ್ರಿಲ್ 2024, 7:04 IST
Last Updated 26 ಏಪ್ರಿಲ್ 2024, 7:04 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ಕಾಡಂಚಿನ ಗ್ರಾಮ ವಣಚಲುವಿನ ಮತಗಟ್ಟೆಯಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಸ್ಥಳೀಯರು ದೂರಿದರು.

ನಾವೇ ಸ್ವತಃ ಕುಡಿಯುವ ನೀರನ್ನು ಒದಗಿಸಿದ್ದೇವೆ. ರಾತ್ರಿ ವಿದ್ಯುತ್ ಇರಲಿಲ್ಲ ಸಿಬ್ಬಂದಿ ಪರದಾಡಿದರು. ಬೆಳಿಗ್ಗೆಯೂ ಉಪಾಹಾರ ತಡವಾಗಿ ಬಂದಿದೆ ಎಂದು ಸ್ಥಳೀಯರು ಆರೋಪಿಸಿದರು.

11 ಪೊಲೀಸರ ನಿಯೋಜನೆ:

ಈ ಮತಗಟ್ಟೆಗೆ ಒಟ್ಟು 11 ಪೊಲೀಸರನ್ನು ನಿಯೋಜಿಸಲಾಗಿದೆ. ಇವರಲ್ಲಿ ಸಿವಿಲ್, ಕೆ ಎಸ್ ಆರ್ ಪಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದಾರೆ. ‌‌ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಸುತ್ತಮುತ್ತಲಿನ ಕಾಡಿನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಇಲ್ಲಿಗೆ ಸಮೀಪದಲ್ಲೆ ಶಂಕಿತ ನಕ್ಸಲರ ಚಲನವಲನಗಳು ಕಂಡು ಬಂದಿದ್ದವು.

11.30 ರ ವೇಳೆ 80 ಮಂದಿ ಮತದಾನ:

ಶುಕ್ರವಾರ ಮಧ್ಯಾಹ್ನ 11.30 ರ ವೇಳೆಗೆ 190 ಮತದಾರರ ಪೈಕಿ 80 ಮತದಾರರು ಮತದಾನ ಮಾಡಿದ್ದರು. ಒಟ್ಟು ಇಲ್ಲಿ 53 ಮನೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT