ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಟ್ ಕಬಡ್ಡಿ: ವಿರಾಜಪೇಟೆ ತಂಡಕ್ಕೆ ಪ್ರಶಸ್ತಿ

Last Updated 11 ಜನವರಿ 2023, 13:32 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದ ಚೌಡೇಶ್ವರಿ ಯೂತ್ ಕ್ಲಬ್ ವತಿಯಿಂದ ಅಬ್ಬಿಮಠ- ತಲ್ತಾರೆಯ ಚೌಡೇಶ್ವರಿ ದೇವಸ್ಥಾನದ ಮೈದಾನದಲ್ಲಿ ಈಚೆಗೆ ನಡೆದ ಮೊದಲನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿಯಲ್ಲಿ ವಿರಾಜಪೇಟೆ ಬಾಯ್ಸ್ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಕುಶಾಲನಗರದ ಭಗವಾನ್ ತಂಡವನ್ನು ಸೋಲಿಸಿದ ವಿರಾಜಪೇಟೆ ಬಾಯ್ಸ್ ತಂಡ ಆಕರ್ಷಕ ಟ್ರೋಫಿಯೊಂದಿಗೆ ₹ 25 ಸಾವಿರ ನಗದು ಬಹುಮಾನ ಪಡೆಯಿತು.

ಪ್ರಥಮ ಬಹುಮಾನವನ್ನು ವಿರಾಜಪೇಟೆ ಬಾಯ್ಸ್ ಪಡೆಯುವ ಮೂಲಕ 25 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಬಹುಮಾನವನ್ನು ಕುಶಾಲನಗರದ ಟೀಂ ಭಗವಾನ್ ₹ 15 ಸಾವಿರ ಹಾಗೂ ಟ್ರೋಫಿ ಪಡೆಯಿತು. ಮೂರನೇ ಬಹುಮಾನಕ್ಕೆ ತೃಪ್ತಿಪಟ್ಟ ತಲ್ತಾರೆಶೆಟ್ಟಳ್ಳಿ ಗ್ರಾಮದ ಎ ತಂಡ ₹ 7 ಸಾವಿರ ನಗದಿನೊಂದಿಗೆ ಟ್ರೋಫಿ ಪಡೆಯಿತು.

ಪಂದ್ಯ ಪುರುಷೋತ್ತಮ ಆಸೀಫ್, ಉತ್ತಮ ಹಿಡಿತಗಾರ ಟೀಂ ಭಗವಾನ್ ತಂಡದ ಆಲಿ ಪಡೆದರು. ಉತ್ತಮ ದಾಳಿಗಾರ ನವರತ್ನ ಯುವಕ ಸಂಘದ ಸುಮಂತ್ ಪಡೆದರು.

ಪಂದ್ಯಾಟಕ್ಕೆ ಚಾಲನೆ ನೀಡಿದ ಉದ್ಯಮಿ ಹರಪಳ್ಳಿ ರವೀಂದ್ರ ಮಾತ ನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದ ರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದು. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಕ್ರೀಡೆಗೆ ಸ್ವಲ್ಪ ಸಮಯವನ್ನು ಮೀಸಲಿಡಿ’ ಎಂದರು.

ಮುಖಂಡ ಎಸ್.ಜಿ. ಮೇದಪ್ಪ ಮಾತನಾಡಿ, ‘ಗ್ರಾಮೀಣ ಕ್ರೀಡೆಗಳ ಉಳಿವಿಗೆ ಇಂತಹ ಕ್ರೀಡಾಕೂಟಗಳು ಸಹಕಾರಿ. ಎಲ್ಲೆಡೆ ಇಂಥ ಪಂದ್ಯಾಟ ನಡೆ ಸಲು ಮುಂದಾಗಬೇಕು’ ಎಂದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಟ್ರೋಫಿ ದಾನಿಗಳಾದ ಹೊಸಳ್ಳಿಯ ರಜಿತ್ ಮತ್ತು ಸಂದೀಪ್, ಭೋವಿ ಸಂಘದ ಜಿಲ್ಲಾಧ್ಯಕ್ಷ ಸುಜಿತ್, ಚೌಡೇಶ್ವರಿ ಯುವಕ ಸಂಘದ ಅಧ್ಯಕ್ಷ ಎಚ್.ಎನ್. ಈಶ್ವರ, ಶಾಂತಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ಬಿ.ಬೇಬಿ, ಕಾರ್ಯದರ್ಶಿ ಟಿ.ಈ. ಸತೀಶ್, ಉಪಾಧ್ಯಕ್ಷ ಎ.ಕೆ.ನವೀನ್, ಗೌರವಾಧ್ಯಕ್ಷ ಟಿ.ಜೆ. ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT