ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಮೂಕಳೇರ, ಬಲ್ಲಂಡ ತಂಡಕ್ಕೆ ಭರ್ಜರಿ ಜಯ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ
Published 5 ಮೇ 2024, 6:55 IST
Last Updated 5 ಮೇ 2024, 6:55 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಮೂಕಳೇರ ತಂಡ ಕಲಿಯಂಡ ತಂಡದ ವಿರುದ್ಧ 88 ರನ್ ಗಳಿಂದ ಭರ್ಜರಿ ಜಯ ಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮೂಕಳೇರ 2 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಕಲಿಯಂಡ ಕೇವಲ 40 ರನ್ ಗಳಿಸಿತು.

ಬಲ್ಲಂಡ ತಂಡ ಕಾಟಿಮಾಡ ತಂಡದ ಎದುರು 78 ರನ್‌ಗಳಿಂದ ಜಯ ಗಳಿಸಿತು. ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಬಲ್ಲಂಡ ನಿಗದಿತ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್‌ಗಳ ಸವಾಲಿನ ಗುರಿ ಒಡ್ಡಿತು. ಬೃಹತ್ ರನ್‌ಗಳ ಬೆನ್ನತ್ತಿದ ಕಾಟಿಮಾಡ 88 ರನ್ ಗಳಿಸುವುದಕ್ಕೆ ಮಾತ್ರ ಶಕ್ತವಾಯಿತು.

ಕೊಟ್ಟಂಗಡ ಅಣ್ಣೀರ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಅಣ್ಣೀರ ನೀಡಿದ 48 ರನ್‌ಗಳ ಗುರಿಯನ್ನು ಕೊಟ್ಟಂಗಡ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ಕೇವಲ 3.3 ಓವರ್‌ನಲ್ಲಿ ನಿರಾಯಾಸವಾಗಿ ತಲುಪಿತು.

ಅಟ್ರಂಗಡ ಕೈಪತೀರ ವನ್ನು 25 ರನ್‌ಗಳಿಂದ ಸೋಲಿಸಿತು. ಉಭಯ ತಂಡಗಳು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದವು. ಆದರೆ, ಕೊನೆಯಲ್ಲಿ ಅಟ್ರಂಗಡ ತಂಡದ ಬೌಲರ್‌ಗಳು ತೋರಿದ ಉತ್ತಮ ಪ್ರದರ್ಶನದಿಂದಾಗಿ ಕೈಪತ್ತೀರ ಅಟ್ರಂಗಡ ನೀಡಿದ 140 ರನ್‌ಗಳ ಗುರಿಯನ್ನು ತಲುಪಲಾಗದೆ 115 ರನ್ ಗಳಿಸಿ ಗೆಲುವು ಕೈ ಚೆಲ್ಲಿತು.

ಪುದಿಯಂಡ ತೀತೀರ ವಿರುದ್ಧ 10 ವಿಕೆಟ್‌ಗಳಿಂದ ಜಯ ಗಳಿಸಿತು. ತೀತೀರ ತಂಡ ನೀಡಿದ 58 ರನ್‌ಗಳ ಗುರಿಯನ್ನು ಮೊದಲ ವಿಕೆಟ್ ಜತೆಯಾಟದಲ್ಲಿಯೇ ತಲುಪಿತು.

ಹಂಚಟ್ಟೀರ ತಂಡ ಪಾಲಚಂಡ ತಂಡ ನೀಡಿದ 61 ರನ್‌ಗಳ ಗುರಿಯನ್ನು ಕೇವಲ 2 ವಿಕೆಟ್ ನಷ್ಟಕ್ಕೆ ತಲುಪಿ 8 ವಿಕೆಟ್‌ಗಳಿಂದ ಜಯ ಗಳಿಸಿತು.

ಚೇರಂಡ ಮುಕ್ಕಾಟೀರ (ಬೇತ್ರಿ) ಎದುರು 8 ವಿಕೆಟ್‌ಗಳಿಂದ ಜಯ ಸಾಧಿಸಿತು. ಮುಕ್ಕಾಟೀರ ತಂಡ ಮೊದಲು ಬ್ಯಾಟಿಂಗ್ ನಡೆಸಿ 73 ರನ್ ಗಳಿಸಿದರೆ ಬಳಿಕ ಬ್ಯಾಟಿಂಗ್ ಮಾಡಿದ ಚೇರಂಡ 6.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 75 ರನ್ ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತು.

ಅಚ್ಚಕಾಳೇರ ಕೂಪದೀರ ಎದುರು 7 ವಿಕೆಟ್‌ಗಳ ಜಯ ಸಾಧಿಸಿತು. ಕೂಪದೀರ ನೀಡಿದ 94 ರನ್‌ಗಳ ಗುರಿಯನ್ನು ಅಚ್ಚಕಾಳೇರ 3 ವಿಕೆಟ್ ನಷ್ಟಕ್ಕೆ ತಲುಪಿತು.

ನಾಟೋಳಂಡ ಚೋಡುಮಾಡ ಎದರು 5 ವಿಕೆಟ್‌ಗಳಿಂದ ಜಯ ಗಳಿಸಿದರೆ, ಪಾರುವಂಗಡ 9 ವಿಕೆಟ್‌ಗಳಿಂದ ಬೊಪ್ಪಾಡ್ ತಂಡದ ಎದುರು ಗೆಲುವು ಗಳಿಸಿತು. ದಾಸಂಡ ಗುಮ್ಮಟೀರ ತಂಡದ ವಿರುದ್ಧ ವಾಕ್ ಓವರ್ ಪಡೆಯಿತು.

ದಿನ ಕಳೆದಂತೆ ಕಳೆಗಟ್ಟುತ್ತಿರುವ ಕ್ರಿಕೆಟ್ ಟೂರ್ನಿ 8 ಓವರ್‌ಗಳಲ್ಲಿಯೇ 100ರ ಗಡಿ ದಾಟಿದ ಕೆಲವು ತಂಡಗಳು ಕೆಲವು ತಂಡಗಳಿಗೆ 10 ವಿಕೆಟ್‌ಗಳ ಸುಲಭ ಗೆಲುವು
ಮಹಿಳಾ ವಿಭಾಗ: 1 ರನ್‌ ರೋಚಕ ಗೆಲುವು
ತೀವ್ರ ಹಣಾಹಣಿಯಿಂದ ಕೂಡಿದ್ದ ಮಹಿಳಾ ವಿಭಾಗದ ಪಂದ್ಯಗಳಲ್ಲಿ ನಾಗಂಡ ತೀತಮಾಡ ಎದುರು ಕೇವಲ 1 ರನ್‌ನಿಂದ ರೋಮಾಂಚನಕಾರಿ ಜಯ ಸಾಧಿಸಿತು. ನಾಗಂಡ ನೀಡಿದ 45 ರನ್‌ಗಳ ಗುರಿಯನ್ನು ಬೆನ್ನತ್ತಿದ ತೀತಮಾಡ ಉತ್ತಮ ಬ್ಯಾಟಿಂಗ್ ನಡೆಸದರೂ 44 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇವಲ 1 ರನ್‌ನಿಂದ ಸೋಲಪ್ಪಿಕೊಂಡು ನಿರಾಸೆ ಅನುಭವಿಸಿತು. ಅಳಮೇಂಗಡ ಅಚ್ಚಪಂಡ ಎದುರು 4 ರನ್‌ಗಳಿಂದ ಜಯ ಗಳಿಸಿತು. ಅಳಮೇಂಗಡ ನೀಡಿದ 38 ರನ್‌ಗಳ ಗುರಿಯನ್ನು ಬೆನ್ನತ್ತಿದ  ಅಚ್ಚಪಂಡ 33 ರನ್‌ಗಳನ್ನಷ್ಟೇ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.ಮಣವಟ್ಟೀರ ಕೇಲೇಟೀರ ತಂಡದ ವಿರುದ್ಧ 18 ರನ್‌ಗಳಿಂದ ಜಯ ಗಳಿಸಿತು. ಮಣವಟೀರ ತಂಡ ನೀಡಿದ 41 ರನ್‌ಗಳ ಗುರಿ ತಲುಪಲಾಗದ ಕೇಲೇಟೀರ ಕೇವಲ 23 ರನ್ ಮಾತ್ರ ಗಳಿಸಿತು. ಪೆಮ್ಮಂಡ ಆಪಾಡಂಡ ವಿರುದ್ಧ 10 ವಿಕೆಟ್‌ಗಳಿಂದ ಸುಲಭ ಜಯ ಗಳಿಸಿತು. ಆಪಾಡಂಡ ಪೆಮ್ಮಂಡ ತಂಡಕ್ಕೆ 47 ರನ್‌ಗಳ ಗುರಿ ನೀಡಿತು. ಇದನ್ನು ಪೆಮ್ಮಂಡ ತಂಡ ನಿರಾಯಾಸವಾಗಿ ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT